newsics.com
ಉತ್ತರ ಕನ್ನಡ : ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿ, ರೂಮ್ ಮಾಡ್ತೀನಿ ಹೋಗೋಣ ಬರ್ತಿಯಾ ಎಂದು ಕೇಳಿದವನಿಗೆ ಚಪ್ಪಲಿ ಏಟು ಕೊಟ್ಟಿರುವ ಘಟನೆ ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದ್ಯದ ನಶೆಯಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ, ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯೊಂದರ ಬಳಿ ಹೋಗಿ ಅನಾಚಾರವಾಗಿ ವರ್ತಿಸಿದ ಘಟನೆ ಸಾರ್ವಜನಿಕ ಅಸಹ್ಯಕ್ಕೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ, ಬಸ್ ನಿರೀಕ್ಷಿಸುತ್ತಿದ್ದ ವೇಳೆ ಬಂದ ವ್ಯಕ್ತಿ ‘ರೂಮ್ ಮಾಡ್ತೀನಿ ಬಾ’ ಎಂಬ ಕೀಳಮಟ್ಟದ ಶಬ್ದಗಳಿಂದ ಕೆಣಕಿದ್ದು, ಕೂಡಲೇ ಕೋಪಗೊಂಡ ದೀಪಾ ಚಪ್ಪಲಿಯಿಂದ ಆತನನ್ನು ಚಪ್ಪಲಿಯಿಂದ ಥಳಿಸಿದ್ದು, ಕೆನ್ನೆಗೆ ಹೊಡೆದು ನಶೆ ಇಳಿಸಿದ್ದಾಳೆ.
ಈ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.