newsics.com
ಸ್ಟಾರ್ ಸುವರ್ಣ ವಾಹಿನಿಯ ನೀ ಇರಲು ಜೊತೆಯಲ್ಲಿ ಸೀರಿಯಲ್ ಅಲ್ಲಿ ಅಮೃತವರ್ಷಿಣಿ ಸೀರಿಯಲ್ ಖ್ಯಾತಿಯ ರಜಿನಿ ಅಭಿನಯಿಸುತ್ತಿದ್ದಾರೆ.ಕಿರುತೆರೆಯ ಅದ್ಭುತ ಕಲಾವಿದೆ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ, ದಶಕಗಳ ನಂತರ ಮತ್ತೆ ಸ್ಟಾರ್ ಸುವರ್ಣಗೆ ಮರಳಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರೋ ನಟಿ, ನಿಮ್ಮೆಲ್ಲರ ಪ್ರೀತಿ ಪ್ರೋತ್ಸಹದಿಂದ.. ನೀ ಇರಲು ಜೊತೆಯಲಿ ಧಾರಾವಾಹಿ ಮೂಲಕ ಉರ್ಮಿಳಾ ದಿವಾನ್ ಪಾತ್ರಧಾರಿ ಆಗಿ ನಿಮ್ಮ ಮುಂದೆ ಬರ್ತಿದೀನಿ ಇಂತಿ ನಿಮ್ಮ ರಜಿನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾಯಕನ ಅತ್ತಿಗೆ ಪಾತ್ರ ಉರ್ಮಿಳಾ ದಿವಾನ್
ರಂಗನಾಯಕಿ ಖ್ಯಾತಿಯ ಪವನ್ ನಾಯಕನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ನಾಯಕಿ ಪಾತ್ರದ್ದಲ್ಲಿ ಸಲೋಮಿ ಡಿಸೋಜಾ ಕಾಣಿಸಿಕೊಳ್ತಿದ್ದಾರೆ. ಸಲೋಮಿ ಕನ್ನಡದವ್ರೇ ಆದ್ರೂ ಹೆಚ್ಚು ತೆಲುಗು ಭಾಷೆಯಲ್ಲಿ ಚಿರಪರಿಚಿತರು. ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸಾಲು ಸಾಲು ಜನಪ್ರಿಯ ಧಾರವಾಹಿಗಳನ್ನು ನಿರ್ದೇಶಿಸಿದ ನಿರ್ದೇಶಕ ಧರಣಿ ಜಿ ರಮೇಶ್ ಅವರು ನೀ ಇರಲು ಜೊತೆಯಲ್ಲಿ ಧಾರಾವಾಹಿಯ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
https://www.instagram.com/p/DMCHUdLPB7A/?igsh=MXBycXFqbjU2eWVubw==