newsics.com
ಒಟ್ಟವಾ: ಓರ್ವ ಪೈಲಟ್ ವಿಮಾನದ ಜೊತೆ ಪರಾರಿಯಾಗಿರುವ ಘಟನೆ ನಡೆದಿದ್ದು, ಕೆನಡಾದಲ್ಲಿ ವಿಮಾನ ಲ್ಯಾಂಡ್ ಮಾಡಿದ ಸಂದರ್ಭದಲ್ಲಿ ಪೈಲಟ್‌ನನ್ನು ಬಂಧಿಸಲಾಗಿದೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಬ್ಬ ಪೈಲಟ್ ಹಾರಿಸಬಹುದಾದ ಸಣ್ಣ ಸೆಸ್ನಾ 172 ವಿಮಾನವನ್ನು ಕಳ್ಳತನ ಮಾಡಲಾಗಿತ್ತು. ಹೈಜಾಕ್ ಆಗಿರುವ ವಿಮಾನ ಕೆನಾಡ ಗಡಿ ಪ್ರವೇಶಿಸಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಮತ್ತು ಏರ್‌ಪೋರ್ಟ್ ಸಿಬ್ಬಂದಿ ಅಲರ್ಟ್ ಆಗಿದ್ದರು.
ವಿಮಾನ ಲ್ಯಾಂಡ್ ಆಗುವ ಮುನ್ನವೇ ಏರ್ಪೋರ್ಟ್ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿತ್ತು. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ವಿಮಾನವನ್ನು ಕದ್ದು ಹಾರಿಸಿದ ಪೈಲಟ್‌ನನ್ನು ಬಂಧಿಸಿದ್ದಾರೆ.