newsics.com
ಬೆಂಗಳೂರು: ಕರ್ನಾಟಕದ 14 ಜಿಲ್ಲೆಗಳಲ್ಲಿ ಜುಲೈ 22ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮುಂದಿನ 48ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾದಂತಹ ಸಂದರ್ಭಗಳಲ್ಲಿ ಶಾಲೆಗಳಿಗೆ ನೀಡಲಾಗಿದ್ದು, ಈ ರಜೆಗಳನ್ನು ಸರಿದೂಗಿಸುವ ಕೆಲಸಗಳು ಕೂಡ ನಡೆಯುತ್ತಿದೆ. ಇದೀಗ ಮತ್ತೆ ಒಂದು ವೇಳೆ ಭಾರೀ ಮಳೆ ಮುಂದುವರೆಯುವ ಮುನ್ಸೂನೆ ಇರುವುದರಿಂದ ಹಲವೆಡೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮುಲ್ಕಿ, ಕ್ಯಾಸಲ್ರಾಕ್, ಶಕ್ತಿನಗರ, ಬಂಟವಾಳ, ಕದ್ರಾ, ಕುಂದಾಪುರ, ಕೋಟಾ, ಮಂಕಿ, ಶಿರಾಲಿ,ಆಗುಂಬೆ, ಅಂಕೋಲಾ, ಸುಳ್ಯ, ಗೋಕರ್ಣ, ಮಾಣಿ, ಸಿದ್ದಾಪುರ ಲೋಂಡಾದಲ್ಲಿ ಭಾರಿ ಮಳೆಯಾಗಿದೆ. ಕಾರವಾರ, ಮೂಡುಬಿದಿರೆ, ಯಲ್ಲಾಪುರ, ಪುತ್ತೂರು, ಖಾನಾಪುರ, ಭಾಗಮಂಡಲ, ಕಮ್ಮರಡಿ, ಹೊನ್ನಾವರ, ಬನವಾಸಿ, ಜೋಯ್ಡಾ, ಧರ್ಮಸ್ಥಳ, ಜಯಪುರ, ನಾಪೋಕ್ಲು, ಹಳಿಯಾಳ, ಬೆಳ್ತಂಗಡಿ, ಮುಂಡಗೋಡು, ನಿಪ್ಪಾಣಿ, ಕಿತ್ತೂರು, ಹುಂಚದಕಟ್ಟೆ, ಕೊಪ್ಪ, ಪೊನ್ನಂಪೇಟೆ, ಕಿರವತ್ತಿ, ಬೈಲಹೊಂಗಲ, ಧಾರವಾಡ, ಕಲಘಟಗಿ, ಶಿಗ್ಗಾಂವ್, ಸಂಕೇಶ್ವರ, ಧಾರವಾಡ, ಹುಬ್ಬಳ್ಳಿ, ಸೋಮವಾರಪೇಟೆ, ಕಳಸದಲ್ಲಿ ಮಳೆಯಾಗಿದೆ.