newsics.com
ವಿಜಯನಗರ : ಕಾಂಗ್ರೆಸ್ ಶಾಸಕರ ಮನಸ್ಸುಗಳು ಕದಲಿದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಚಿತ ಎಂದು ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ ನುಡಿಯಲಾಗಿದೆ.
ಜಿಲ್ಲೆಯ ಹೂವಿನಡಗಲಿಯ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಈ ನುಡಿಯಲ್ಲಿ ಡಿಸಿಎಂ ಡಿಕೆಶಿ ಸಿಎಂ ಆಗುವ ಯೋಗ ಇದೆ ಎಂಬುವುದಾಗಿ ಶ್ರೀವೆಂಕಪ್ಪಯ್ಯ ಮೈಲಾರದ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ಬದಲಾವಣೆ ಗೂಡಾರ್ಥದಲ್ಲಿದೆ ಎಂದು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿಯನ್ನು ಮೈಲಾರಲಿಂಗೇಶ್ವರ ದೇವರ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದ್ದಾರೆ. 2025ರ ಪ್ರಸಕ್ತ ವರ್ಷದ ದೈವವಾಣಿ ತುಂಬಿದ ಕೊಡ ತುಳಿಕಿತಲೇ ಪರಾಕ್ ಎಂಬುದಾಗಿದೆ.
ಇದರ ಅರ್ಥ ರಾಜ್ಯದಲ್ಲಿ ತುಂಬಿದ ಕೊಡಪಾನದಂತೆ ಈಗ ಸರ್ಕಾರ ಇದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೇ ಯಾವುದೇ ತೊಂದರೆ ಆಗಲ್ಲ. ಮನಸ್ಸು ಕದಲಿದರೇ ಸರ್ಕಾರಕ್ಕೆ ಅಪಾಯವಿದೆ ಎಂಬುದಾಗಿ ಕಾರ್ಣಿಕ ನುಡಿಯಾಗಿದೆ. ತುಂಬಿದ ಕೊಡ ಏನಾದರೂ ತುಳಿಕಿದರೇ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಬದಲಾವಣೆ ಆಗೋದು ಖಚಿತ ಎಂದು ವೆಂಕಪ್ಪಯ್ಯ ಒಡೆಯರ್ ತಿಳಿಸಿದ್ದಾರೆ.
ಸಿಡಿಲು ಬಡಿದ ನಂತರವೇ ಈ ತರಕಾರಿ ಬೆಳೆಯುವುದು; ಹಲವು ಕಾಯಿಲೆಗಳಿಗೆ ಇದು ಸಂಜೀವಿನಿ!