newsics.com
ಹಿಂದೂ ಧರ್ಮದಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಲಕ್ಷ್ಮೀ ಅನುಗ್ರಹವನ್ನು ಪಡೆಯುವುದು ಅಂದ್ರೆ ಜೀವನದಲ್ಲಿ ಎಲ್ಲವೂ ಸಿಕ್ಕಿದಂತೆ. ಆದರೆ ನೀವು ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮೀ ಕೋಪಗೊಳ್ಳುವಂತೆ ಮಾಡುತ್ತೆ.
ಸೂರ್ಯೋದಯದ ನಂತರ ಕ್ಲೀನ್ ಮಾಡೋದುವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯದ ನಂತರ ಮನೆಯನ್ನು ಸ್ವಚ್ಛಗೊಳಿಸಬಾರದು. ಸೂರ್ಯೋದಯದ ನಂತರ ಸ್ವಚ್ಛಗೊಳಿಸೋದ್ರಿಂದ, ತಾಯಿ ಲಕ್ಷ್ಮಿ ಕೋಪಗೊಂಡು ಬಾಗಿಲಿನಿಂದ ಹಿಂದಿರುಗುತ್ತಾಳೆ ಎನ್ನುವ ನಂಬಿಕೆ ಇದೆ.
ಪೂಜೆಯ ನಂತರ ತಾಯಿ ಲಕ್ಷ್ಮಿಗೆ ಪ್ರಸಾದವನ್ನು ಅರ್ಪಿಸಲಾಗುತ್ತದೆ, ಆದರೆ ಪ್ರಸಾದವನ್ನು ಅರ್ಪಿಸಿದ ತಕ್ಷಣ ಆಹಾರ ತೆಗೆದುಕೊಳ್ಳಬಾರದು. ಇದರಿಂದ ತಾಯಿ ಲಕ್ಷ್ಮಿಗೆ ಸಿಟ್ಟು ಬರುತ್ತದೆ.
ಯಾವುದೇ ವ್ಯಕ್ತಿಯು ಸಂಜೆ ಮಲಗಬಾರದು ಎಂದು ಧರ್ಮಗ್ರಂಥಗಳು ಹೇಳುತ್ತವೆ. ಇದು ಲಕ್ಷ್ಮಿ ದೇವಿಯ ಆಗಮನದ ಸಮಯ. ಇಂತಹ ಸಮಯದಲ್ಲಿ ಮನೆಯಲ್ಲಿ ಯಾರಾದರು ಮಲಗಿದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ ಎಂದು ಗ್ರಂಥಗಳಲ್ಲಿ ತಿಳಿಸಿದೆ.
ಹೆಣ್ಣು ಮಕ್ಕಳು ಕೋಪ ಮಾಡಿಕೊಳ್ಳುವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತೆ. ಹಾಗಾಗಿ ಕೋಪ ಕಡಿಮೆ ಮಾಡಬೇಕು. ಧರ್ಮಗ್ರಂಥಗಳ ಪ್ರಕಾರ, ಜನರು ಹೆಚ್ಚು ಕೋಪಗೊಳ್ಳುವ ಮನೆಯಿಂದ ಲಕ್ಷ್ಮೀ ದೇವಿ ಹೊರ ಹೋಗುತ್ತಾಳೆ.
ಸಂಜೆ ಪೊರಕೆಯನ್ನು ತಂದು ಮನೆಯಲ್ಲಿ ಇಟ್ಟರೆ ಅದು ಬಡತನಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಉಪ್ಪು ದೇಹದ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ಆದರೆ ರಾತ್ರಿಯಲ್ಲಿ ಅದನ್ನು ಖರೀದಿಸುವುದರಿಂದ ಮನೆಯಲ್ಲಿ ಮನಸ್ಸಿನ ಶಾಂತಿ ಹದಗೆಡುತ್ತದೆ. ಸಂಜೆಯ ನಂತರ ಹಾಲು, ಸಾಸಿವೆ ಎಣ್ಣೆ, ಚೂಪಾದ ವಸ್ತುಗಳು, ಕಪ್ಪು ಬಣ್ಣದ ವಸ್ತುಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಮನೆಗೆ ತರುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.
.