newsics.com
ಪಾಕಿಸ್ತಾನಿ ನಟಿ ಮತ್ತು ರೂಪದರ್ಶಿ ಹುಮೈರಾ ಅಸ್ಗರ್ ಅಲಿ ಅವರು ಕರಾಚಿಯ ಡಿಫೆನ್ಸ್ ಹೌಸಿಂಗ್ ಸೊಸೈಟಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಹುಮೈರಾ ಅವರ ಶವ ಪತ್ತೆಯಾಗುವ ಸುಮಾರು ಎರಡು ವಾರಗಳ ಮೊದಲು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಗಬ್ಬುವಾಸನೆ ಬೀರುತ್ತಿದ್ದ ಕಾರಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಟಿ ಶವ ಪತ್ತೆಯಾಗಿದೆ.ನಟಿ ಸಾವಿಗೆ ಕಾರಣ ಕುರಿತು ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.
ಸ್ಥಳೀಯರು ನೀಡಿದು ದೂರಿನ ಆಧಾರದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಾರ್ಟ್‌ಮೆಂಟ್‌ನಲ್ಲಿ ಹುಮೈರಾ ಮನೆಯ ಬಾಗಿಲು ಒಡೆದ ಪೊಲೀಸರು ಒಳ ಪ್ರವೇಶಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ.
https://www.newsics.com/2025/07/09/chinese-women-dressed-in-sarees-like-indian-women/