newsics.com
ಬಿನ್ ಬಾಸ್ ಕನ್ನಡ ಸೀಸನ್ 12′ ಶೋವನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡೋದು ಪಕ್ಕಾ ಆಗಿದೆ. ಆದರೆ ಈ ಶೋ ಯಾವಾಗ ಶುರು ಆಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಎಂದಿನಂತೆ ಈ ಬಾರಿಯೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ʼಬಿಗ್ ಬಾಸ್ʼ ಶೋ ಶುರು ಆಗಬಹುದು.
ಈಗಾಗಲೇ ಸ್ಪರ್ಧಿಗಳ ಆಯ್ಕೆ ತಯಾರಿ ನಡೆಯುತ್ತಿದೆ. ಈ ಶೋ ಪ್ರಸಾರ ಆಗಬೇಕು ಎಂದರೆ ಮೂರು ಧಾರಾವಾಹಿಗಳು ಅಂತ್ಯ ಆಗಬೇಕಿದೆ.
ಮೂರು ಧಾರಾವಾಹಿಗಳು ಅಂತ್ಯ!
ಈ ಹಿಂದಿನಿಂದಲೂ ಬಿಗ್ ಬಾಸ್ ಶೋಗೋಸ್ಕರ ಮೂರು ಧಾರಾವಾಹಿಗಳು ಅಂತ್ಯ ಆಗಿವೆ. ಇನ್ನು ಕೆಲ ಧಾರಾವಾಹಿಗಳ ಟೈಮಿಂಗ್ ಬದಲಾಯಿಸಲಾಗಿತ್ತು. ಸಾಮಾನ್ಯವಾಗಿ ಟಿಆರ್‌ಪಿಯಲ್ಲಿ ಕಡಿಮೆ ಇರುವ ಧಾರಾವಾಹಿಗಳನ್ನೋ ಅಥವಾ ಲೀಡ್ ಕಲಾವಿದರು ಧಾರಾವಾಹಿಯಲ್ಲಿ ಮುಂದುವರೆಯಲು ರೆಡಿ ಇಲ್ಲ ಅಂದ್ರೆ ಸೀರಿಯಲ್‌ಗೆ ಇತಿಶ್ರೀ ಹಾಡಲಾಗುವುದು.
ಯಾವ ಸೀರಿಯಲ್‌ಗಳು ಅಂತ್ಯವಾಗತ್ತೆ?
ಹಾಗಾದರೆ ಈ ಬಾರಿ ಯಾವ ಧಾರಾವಾಹಿಗಳು ಅಂತ್ಯ ಆಗಬಹುದು ಎಂಬ ಕುತೂಹಲ ನಿಮಗೂ ಇರಬಹುದು. ಅಂದಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಧಾರಾವಾಹಿಗಳಲ್ಲಿ ರಾಮಾಚಾರಿ ಧಾರಾವಾಹಿ, ಕರಿಮಣಿ , ದೃಷ್ಟಿಬೊಟ್ಟು ಧಾರಾವಾಹಿಯ ಟಿಆರ್‌ಪಿ ಕಡಿಮೆ ಇದೆ. ಹೀಗಾಗಿ ಈ ಮೂರು ಸೀರಿಯಲ್‌ಗಳು ಎಂಡ್ ಆಗಬಹುದು.
ಬಿಗ್ ಬಾಸ್ ಕಥೆ ಏನು?
ಬಿಗ್ ಬಾಸ್ ಶೋ ನಿರೂಪಣೆ ಮಾಡೋದಿಲ್ಲ ಎಂದು ಹೇಳಿ, ಆಮೇಲೆ ಬಿಗ್ ಬಾಸ್ ಶೋ ನಿರೂಪಣೆ ಮಾಡ್ತೀನಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಾಗಿ ಈ ಬಾರಿ ಶೋನಲ್ಲಿ ಏನಾದರೂ ವಿಶೇಷತೆ ಇರಬಹುದಾ ಎಂಬ ಪ್ರಶ್ನೆ ಎದ್ದಿದೆ.
Muharram celebrations; ಮೊಹರಂ ಆಚರಣೆ ವೇಳೆ ಅಗ್ನಿ ಕುಂಡಕ್ಕೆ ಬಿದ್ದ ವ್ಯಕ್ತಿ; ಗಂಭೀರ ಗಾಯ