newsics.com
ನಟಿ ಸಾನ್ಯಾ ಅಯ್ಯರ್ ಮದುವೆ ಬಗ್ಗೆ ಮಾತನಾಡಿದ್ದು, ತಾವು ಲವ್ ಮ್ಯಾರೇಜ್ ಆಗೋದು ಎಂದಿದ್ದಾರೆ.
ಈ ಕುರಿತು ಮಾತನಾಡಿದ ನಟಿ, ತಾವು ಲವ್ ಮ್ಯಾರೇಜ್ ಆಗೋದು, ಹುಡುಗ ಸ್ವಾವಲಂಬಿಯಾಗಿರಬೇಕು, ಬಹಳಷ್ಟು ಪ್ರೀತಿ ಕೊಡುವಂಥವರು ಆಗಿರಬೇಕು. ಒಳ್ಳೆಯ ಗುರಿ ಇರಬೇಕು, ಎಮೋಷನಲಿ ಇಂಟಲಿಜೆಂಟ್ ಆಗಿರಬೇಕು. ನಾನು ಬಹಳಷ್ಟು ಪ್ರೀತಿ ಕೊಡುತ್ತಾ ಹೋಗುತ್ತೇನೆ, ಆತನೂ ಪ್ರೀತಿ ಕೊಡುವವನು ಆಗಿರಬೇಕು ಎಂದಿದ್ದಾರೆ. ಅದಕ್ಕೆ ನಟಿಯ ಕಾಲೆಳೆಯುತ್ತಿರುವ ಪಡ್ಡೆ ಹೈಕ್ಳು, ಇವೆಲ್ಲಾ ಕ್ವಾಲಿಟಿ ನನ್ನಲ್ಲಿ ಇದೆ, ಪ್ರೀತಿಯ ಧಾರೆಯನ್ನು ನೀನು ಹೇಳಿದ್ದಕ್ಕಿಂತ ಹೆಚ್ಚಿಗೇ ಹರಿಸುತ್ತೇನೆ ಆದ್ರೆ ದುಡ್ಡು ಮಾತ್ರ ಇಲ್ಲ, ಮದ್ವೆ ಆಗ್ತಿಯಾ ಎಂದು ಕಾಮೆಂಟ್ ಮಾಡಿದ್ದಾರೆ.
ನಟಿ ಸಾನ್ಯಾ ಅಯ್ಯರ್, ಬಿಗ್ ಬಾಸ್ 9 ಸೀಸನ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದರು. ರೂಪೇಶ್ ಶೆಟ್ಟಿ ಜೊತೆಗಿನ ಆಪ್ತತೆ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದ ಸಾನ್ಯಾ ಅಯ್ಯರ್ ಕಿರುತೆರೆಯಲ್ಲಿಯೂ ಎತ್ತಿದ ಕೈ. ಈಕೆ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರೋ ನಟಿ, ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಲೇ ಇರುತ್ತಾರೆ.
https://www.instagram.com/reel/DLpWZjHx81q/?igsh=c3VjcjdkeWRrdWV1
UPI Powered Bank Branch ಭಾರತದ ಮೊದಲ ಸಂಪೂರ್ಣ ಯುಪಿಐ ಆಧಾರಿತ ಬ್ಯಾಂಕ್ ಶಾಖೆಯಲ್ಲಿ ಏನೇನಿದೆ?