newsics.com
ಬೆಂಗಳೂರು: ಭಾರತದ ಮೊದಲ ಸಂಪೂರ್ಣ ಯುಪಿಐ ಆಧಾರಿತ ಬ್ಯಾಂಕ್ ಶಾಖೆಯನ್ನು ಬೆಂಗಳೂರಿನ ಕೋರಮಂಗಲದಲ್ಲಿ ಫಿನ್ಟೆಕ್ ಸಂಸ್ಥೆ ಸ್ಲೈಸ್ ಆರಂಭಿಸಿದೆ.
ಯುಪಿಐ ಇಂಟಿಗ್ರೇಟೆಡ್ ಎಟಿಎಂ, ಇನ್ಸ್ಟಾಂಟ್ ಅಕೌಂಟ್ ಓಪನಿಂಗ್, ನಗದು ವಹಿವಾಟು ಸೇರಿದಂತೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಅನುಭವ ಇಲ್ಲಿ ಸಿಗಲಿದೆ. ಅಂದಹಾಗೆ, ಈ ಬ್ರ್ಯಾಂಚ್ನಲ್ಲಿ ವಹಿವಾಟು ನಡೆಸಲು ಡೆಬಿಟ್ ಕಾರ್ಡ್ ಸಹ ಬೇಕಾಗಿಲ್ಲ. ಯುಪಿಐ ಇದ್ದರೆ ಸಾಕು.
ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ ಈ ಶಾಖೆಯು ಕಾರ್ಡ್ಗಳ ಬದಲಿಗೆ ಯುಪಿಐ ಆ್ಯಪ್ ಬಳಸಿ ಹಣವನ್ನು ಠೇವಣಿ ಇಡಲು ಮತ್ತು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯು ಡಿಜಿಟಲ್ ಕಿಯೋಸ್ಕ್ಗಳನ್ನು ಒಳಗೊಂಡಿದೆ. ಗ್ರಾಹಕರು ಟ್ಯಾಬ್ಲೆಟ್ಗಳನ್ನು ಬಳಸಿಕೊಂಡು ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದೆ. ಶಾಖೆಯ ಆವರಣದೊಳಗೆ ಗ್ರಾಹಕರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರೋಬೋಟ್ ಸಹ ಇದೆ.
ರೋಬೋಟ್ ಸಹಾಯಕ!
ಶಾಖೆಯ ರೋಬೋಟ್ ಸಹಾಯಕ ಮತ್ತು ಯುಪಿಐ ಆಧಾರಿತ ಬ್ಯಾಂಕಿಂಗ್ ಪ್ರಕ್ರಿಯೆಗಳನ್ನು ತೋರಿಸುವ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಪ್ರಾಯೋಗಿಕವಾಗಿ ಈ ಯುಪಿಐ ಆಧಾರಿತ ಹೊಸ ಶಾಖೆಯನ್ನು ಆರಂಭಿಸಲಾಗಿದೆ. ಶಾಖೆಗೆ ಭೇಟಿ ನೀಡುವ ಗ್ರಾಹಕರು ಕನಿಷ್ಠ ಮಾನವ ಸಂವಹನ ಮತ್ತು ಪೂರ್ಣ ಪ್ರಮಾಣದಲ್ಲಿ ಯುಪಿಐ ನೆರವಿನೊಂದಿಗೆ ನಗದು ಠೇವಣಿ ಇರಿಸುವಿಕೆ, ಹಿಂಪಡೆಯುವಿಕೆ ಮತ್ತು ಖಾತೆ ಸೆಟಪ್ನಂತಹ ಮೂಲಭೂತ ಬ್ಯಾಂಕಿಂಗ್ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದು ಸ್ಲೈಸ್ ತಿಳಿಸಿದೆ.
ಮೂರು ದಿನಗಳ ಕಾಲ ಒಂದೇ ಒಳ ಉಡುಪು: ಪತಿಗೆ ವಿಚ್ಛೇದನ ಪತ್ರ ಬರೆದ ಪತ್ನಿ!