newsics.com
ಸ್ಪೇನ್: ತನ್ನ ಸಹೋದರನ ಜೊತೆ ಫುಟ್ಬಾಲ್ ಪಂದ್ಯಕ್ಕಾಗಿ ತೆರಳುತ್ತಿದ್ದ ವೇಳೆ ಕಾರು ಅಪಘಾತವಾಗಿ ಲಿವರ್ಪೂಲ್ ತಂಡದ ಸ್ಟಾರ್ ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಸಾವನ್ನಪ್ಪಿದ್ದಾರೆ.
28ರ ಹರೆಯದ ಜೋಟಾ ಮದುವೆಯಾಗಿ ಎರಡು ವಾರವಾಗಿದೆ ಅಷ್ಟೇ.ಡಿಯೋಗೋ ಜೋಟಾ ಹಾಗೂ ಆತನ ಸಹದೋರ ಆ್ಯಂಡ್ರೆ ಸಿಲ್ವಾ ಕೂಡ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪೋರ್ಚುಗಲ್ ತಂಡದಲ್ಲಿ ಕ್ರಿಸ್ಟಿಯಾನೋ ರೋನಾಲ್ಡ್ ತಂಡದ ಟೀಮ್ಮೇಟ್ ಆಗಿದ್ದ ಜೋಟಾ, UEFA ನ್ಯಾಷನಲ್ ಲೀಗ್ ಗೆದ್ದುಕೊಂಡಿದ್ದರು. ಜೂನ್ 22 ರಂದು ಡಿಯೋಗೋ ಜೋಟಾ ತನ್ನ ಬಹುಕಾಲದ ಗೆಳತಿಯನ್ನು ಮದುವೆಯಾಗಿದ್ದರು. ಮದುವೆಗೂ ಮೊದಲೇ ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. ಜೂನ್ 22ರಂದು ಮದುವೆಯಾಗಿದ್ದ ಜೋಟಾ ಕೆಲವೇ ದಿನ ಮಾತ್ರ ಫುಟ್ಬಾಲ್ನಿಂದ ದೂರ ಉಳಿದಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ದಿನ ಕಳೆದಿದ್ದ ಜೋಟಾ ಬಳಿಕ ಫುಟ್ಬಾಲ್ ಪಂದ್ಯದ ಅಭ್ಯಾಸ ಆರಂಭಿಸಿದ್ದರು.