newsics.com
ಕನ್ನಡ ಕಿರುತೆರೆಯಲ್ಲಿ ಹಲವು ಹೊಸ ಹೊಸ ಧಾರಾವಾಹಿಗಳ ಬರುತ್ತಲೇ ಇರುತ್ತವೆ. ವೀಕ್ಷಕರು ಎಲ್ಲಾ ಧಾರಾವಾಹಿಗಳನ್ನ ಮನಸಾರೆ ಅಪ್ಪಿಕೊಳ್ಳುತ್ತ ಬಂದಿದ್ದಾರೆ. ಅದರಲ್ಲೂ ವೀಕ್ಷಕರ ನೆಚ್ಚಿನ ಸೀರಿಯಲ್ಗಳಲ್ಲಿ ಅಂತರಪಟ ಧಾರಾವಾಹಿ ಕೂಡ ಒಂದಾಗಿತ್ತು.
ಅಂತರಪಟ ಸೀರಿಯಲ್ನಲ್ಲಿ ಆರಾಧನಾ ಪಾತ್ರದಲ್ಲಿ ನಟಿಸಿದ್ದ ತನ್ವಿಯಾ ಬಾಲರಾಜ್ ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಅಂತರಪಟ ಸೀರಿಯಲ್ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಸದ್ಯ ಬರ್ತ್ ಡೇ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿರೋ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಕಪ್ಪು ಬಣ್ಣದ ಗೌನ್ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ, ನಟಿ ತನ್ವಿಯಾ ಈ ಹಿಂದೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿರುವ ಸಫಾರಿ ಪಾರ್ಕ್ಗೆ ಭೇಟಿ ಕೊಟ್ಟಿದ್ದರು.
https://www.instagram.com/p/DLgl6iMPrda/?igsh=MWY0N2lrYmlwMXh2Yw==