newsics.com
ರಾಮನಗರ: ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿದ್ದು, ಈ ವೇಳೆ ತುರಿಮಣೆಯಿಂದ ಹೊಡೆದು ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮತ್ತಿಕೆರೆಯಲ್ಲಿ ನಡೆದಿದೆ.
ತಿಮ್ಮಮ್ಮ (65) ಮೃತ ದುರ್ದೈವಿ. ಪತಿ ರಂಗಯ್ಯ ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.
ಮತ್ತಿಕೆರೆಯಲ್ಲಿ ವಾಸವಿದ್ದ ತಿಮ್ಮಮ್ಮ ಮತ್ತು ರಂಗಯ್ಯ ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಜಗಳ ಅತಿರೇಖಕ್ಕೇರಿದ್ದು, ರಂಗಯ್ಯ ತುರಿಯುವ ಮಣೆಯಿಂದ ಹೊಡೆದು ತಿಮ್ಮಮ್ಮನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ರಂಗಯ್ಯ ತಿರುಪತಿಗೆ ಪರಾರಿ ಆಗಲು ಯತ್ನಿಸಿದ್ದಾನೆ. ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ʼಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಿʼ ಎನ್ನುವ `ಅಮಿತಾಬ್ ಬಚ್ಚನ್’ ಧ್ವನಿಯಲ್ಲಿದ್ದ `ಕಾಲರ್ ಟ್ಯೂನ್’ ಸ್ಥಗಿತ