Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ವೃದ್ಧಿ,‌ ತ್ರಿಗ್ರಾಹಿ,‌ ಗಜಕೇಸರಿ, ಪರಿವರ್ತನಾ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಶುಭ ಫಲ
ಈ ದಿನಜ್ಯೋತಿಷ್ಯಪಂಚಾಂಗಪ್ರಮುಖ

ASTRO ಇಂದು ವೃದ್ಧಿ,‌ ತ್ರಿಗ್ರಾಹಿ,‌ ಗಜಕೇಸರಿ, ಪರಿವರ್ತನಾ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಶುಭ ಫಲ

Share
4 Min Read
SHARE

newsics.com

ಇಂದು (ಜೂನ್ 25) ವೃದ್ಧಿ ಯೋಗ, ರಾಶಿ ಪರಿವರ್ತನಾ ಯೋಗ, ತ್ರಿಗ್ರಾಹಿ ಯೋಗ, ಗಜಕೇಸರಿ ಯೋಗದ ಜತೆಗೆ ಅನೇಕ ಶುಭ ಯೋಗಗಳು ರೂಪುಗೊಂಡಿವೆ.

ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ಕೆಲವು ರಾಶಿಗಳ ಜನರು ಈ ಶುಭ ಯೋಗಗಳ ಲಾಭ ಪಡೆಯಲಿದ್ದಾರೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ಧಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.

ಇಂದು ನೀವು ಗಣೇಶನ ಕೃಪೆಗೆ ಪಾತ್ರರಾಗಬಹುದು. ಇದರಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ, ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.

ವೃಷಭ ರಾಶಿಗೆ ಸೇರಿದ ಜನರಿಗೆ ಈ ದಿನ ಶುಭವಾಗಿರುವುದು. ವ್ಯಾಪಾರದಲ್ಲಿ ಆದಾಯಕ್ಕಾಗಿ ಹೊಸ ಅವಕಾಶಗಳನ್ನು ಪಡೆಯುವಿರಿ. ವಿಶೇಷವಾಗಿ ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲಾಭ ದೊರಕುವ ಉತ್ತಮ ಅವಕಾಶ ಲಭಿಸಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಮನೆಯವರ ಸಂಪೂರ್ಣ ಬೆಂಬಲ ದೊರಕುವುದು. ಜತೆಗೆ ನೀವು ಹಣವನ್ನು ಉಳಿತಾಯ ಮಾಡುವಲ್ಲಿ ಯಶಸ್ಸು ಕಾಣುವಿರಿ. ಹೂಡಿಕೆಯನ್ನು ಮಾಡಲು ಉತ್ತಮ ದಿನವಾಗಿರುವುದು. ದೀರ್ಘಕಾಲೀನ ಹೂಡಿಕೆಯಿಂದ ಹೆಚ್ಚಿನ ಪ್ರಯೋಜನ ಪಡೆಯುವಿರಿ. ನೀವು ಹೊಟ್ಟೆಗೆ ಸಂಬಂಧಿಸಿದಂತಹ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದು ನೀವು ಅದರಿಂದ ಮುಕ್ತಿ ಪಡೆಯುವಿರಿ. ಅಲ್ಲದೆ ಇಂದು ನಿಮಗೆ ಸಾಕಷ್ಟು ಲಾಭ ದೊರಕಲಿದೆ. ಕೆಲಸ ಮಾಡುವ ಜನರಿಗೆ ಹೊಸ ಜವಾಬ್ದಾರಿಗಳು ದೊರಕುವವು. ಕೆಲಸದಲ್ಲಿ ನಿಮ್ಮನ್ನು ಗೌರವಿಸುವರು. ಜತೆಗೆ ನಿಮ್ಮ ಮಾತು ಮತ್ತು ವ್ಯವಹಾರದಿಂದಾಗಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸು ಗಳಿಸುವಿರಿ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುವುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದುವಿರಿ.

ಮಿಥುನ ರಾಶಿಗೆ ಸೇರಿದ ಜನರಿಗೆ ಬುಧವಾರ(ಜೂ.25) ನೀವಂದುಕೊಂಡಿದ್ದಕ್ಕಿಂತ ಉತ್ತಮ ಫಲಗಳು ದೊರಕಲಿವೆ. ಕೆಲಸ ಮಾಡಲು ಉತ್ತಮ ಅವಕಾಶಗಳು ದೊರಕುವುದು. ನಿಮ್ಮ ವ್ಯಕ್ತಿತ್ವದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ನಿಮ್ಮ ವ್ಯಕ್ತಿತ್ವದಿಂದಾಗಿ ಮತ್ತು ನಿಮ್ಮ ಪ್ರಯತ್ನಗಳಿಂದಾಗಿ ನೀವು ಎಲ್ಲರಿಗಿಂತ ವಿಭಿನ್ನವಾಗಿ ಕಾಣುವಿರಿ. ನಿಮ್ಮ ಸಾಮಾಜಿಕ ಸಂಪರ್ಕಗಳು ವಿಸ್ತಾರಗೊಳ್ಳುವುದು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಮಾತಿನ ಶೈಲಿಯಿಂದ ಎಲ್ಲರನ್ನು ಆಕರ್ಷಿಸುವರು. ಜತೆಗೆ ನಿಮ್ಮೊಳಗೆ ಸಾಹಸಮಯವಾದ ವ್ಯಕ್ತಿತ್ವವನ್ನು ನೋಡಬಹುದಾಗಿದೆ. ಇದರಿಂದಾಗಿ ನೀವು ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವನ್ನು ಹೊಂದುವಿರಿ. ನಿಮ್ಮ ಸುಖ ಸಮೃದ್ಧಿಯಲ್ಲಿ ವೃದ್ಧಿಯಾಗಲಿದೆ. ಹಾಗೆ ನಿಮ್ಮ ಬುದ್ಧಿವಂತಿಕೆಯಿಂದ ಹೆಚ್ಚಿನ ಲಾಭ ಪಡೆಯುವಿರಿ. ಮನೆಯಲ್ಲಿ ಅನುಕೂಲಕರ ವಾತಾವರಣವಿರುವುದು. ನಿಮ್ಮ ಸಂಗಾತಿಯಂದಿಗಿನ ಸಂಬಂಧ ಬಲಗೊಳ್ಳಲಿದೆ ಮತ್ತು ನೀವು ನಿಮ್ಮ ಕೊರತೆಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುವಿರಿ.

ಕನ್ಯಾ ರಾಶಿಗೆ ಸೇರಿದ ಜನರಿಗೆ ಈ ದಿನ ವಿಶೇಷವಾಗಿರುವುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ. ನಿಮ್ಮ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ. ನಿಮ್ಮ ಯಾವುದಾದರೂ ಕೆಲಸ ಅಪೂರ್ಣಗೊಂಡಿದ್ದರೆ ಅವೆಲ್ಲವೂ ಇಂದು ಪೂರ್ಣಗೊಳ್ಳಲಿದೆ. ಜತೆಗೆ ಸರ್ಕಾರಿ ಕೆಲಸ ಮಾಡುವ ಜನರು ಉನ್ನತ ಪದವಿಗಳನ್ನು ಪಡೆಯುವುದರೊಂದಿಗೆ ಸಾಕಷ್ಟು ಲಾಭ ಗಳಿಸಲು ಉತ್ತಮ ದಿನವಾಗಿರುವುದು. ನೀವು ಉನ್ನತಾಧಿಕಾರಿಗಳ ನಂಬಿಕೆಗೆ ಪಾತ್ರರಾಗುವಿರಿ. ಜತೆಗೆ ನಿಮ್ಮ ಕೆಲಸಗಳಲ್ಲಿನ ಅಡೆತಡೆಗಳು ದೂರವಾಗಲಿದೆ. ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಜನರು ತಮ್ಮ ಪ್ರಯತ್ನಗಳಲ್ಲಿ ಯಶಸ್ಸು ಕಾಣುವರು. ಕೆಲಸದಲ್ಲಿ ನೀವೊಂದುಕೊಂಡಂತಹ ಸ್ಥಳಕ್ಕೆ ವರ್ಗಾವಣೆ ಪಡೆಯುವಿರಿ. ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ನೀವು ಯಶಸ್ಸು ಗಳಿಸುವುದರೊಂದಿಗೆ ನಿಮ್ಮ ಗೌರವ, ಖ್ಯಾತಿಯಲ್ಲಿ ವೃದ್ದಿಯಾಗಲಿದೆ. ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ನೀಡುವಿರಿ. ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಆರ್ಥಿಕ ಲಾಭ ದೊರಕುವುದು. ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ.

ತುಲಾ ರಾಶಿಗೆ ಸೇರಿದ ಜನರಿಗೆ ಇಂದು ಅದೃಷ್ಟಶಾಲಿಯಾಗಿರುವುದು. ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ನೀವು ಕಳೆದುಕೊಂಡ ಹಣವನ್ನು ವಾಪಸ್ಸು ಪಡೆಯುವ ಯೋಗವಿದೆ. ನಿಮ್ಮ ಹಳೆಯ ಅಪೂರ್ಣ ಆಸೆಗಳೆಲ್ಲವೂ ಪೂರ್ಣಗೊಳ್ಳುವುದರಿಂದ ಸಂತೋಷದಿಂದಿರುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣಿಸುವ ಯೋಗವಿದೆ. ಈ ಪ್ರಯಾಣವು ನಿಮಗೆ ಸುಖಮಯವಾಗಿರುವುದು. ಈ ಅವಧಿಯಲ್ಲಿ ಹೊಸ ಸಂಪರ್ಕಗಳನ್ನು ಮಾಡುವಿರಿ. ನಿಮ್ಮ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಜನರಿಗೆ ಶುಭ ಸುದ್ದಿ ಲಭಿಸುವುದು. ಜತೆಗೆ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗಲಿದೆ. ಉತ್ತಮ ಫಲವನ್ನು ಪಡೆಯುವುದರೊಂದಿಗೆ ಗಣೇಶನ ವಿಶೇಷ ಕೃಪೆಗೆ ಪಾತ್ರರಾಗುವಿರಿ. ನೀವು ದಾನ ಧರ್ಮಗಳನ್ನು ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುವಿರಿ. ಮನೆಯಲ್ಲಿ ನಿಮ್ಮ ತಂದೆಯ ಸಂಪೂರ್ಣ ಬೆಂಬಲವನ್ನು ಪ್ರತಿ ಹೆಜ್ಜೆಯಲ್ಲಿ ಪಡೆಯುವಿರಿ. ನಿಮ್ಮ ತಂದೆಯ ಸಹಾಯದಿಂದ ವೃತ್ತಿ ಜೀವನದಲ್ಲಿ ಉತ್ತಮ ಫಲಗಳು ಪ್ರಾಪ್ತಿಯಾಗುವುವು. ಜತೆಗೆ ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ.

ಕುಂಭ ರಾಶಿಗೆ ಸೇರಿದ ಜನರಿಗೆ ಈ ದಿನ(ಜೂ.25) ಉತ್ತಮ ಫಲಗಳ ಪ್ರಾಪ್ತಿಯಾಗುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಧನ ಲಾಭಕ್ಕಾಗಿ ಹೊಸ ಅವಕಾಶಗಳನ್ನು ಪಡೆಯುವಿರಿ. ಈ ಮೊದಲೇ ಮಾಡಿದಂತಹ ಕಠಿಣ ಪರಿಶ್ರಮಕ್ಕೆ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಹೂಡಿಕೆ ಮಾಡುವುದರಿಂದ ನೀವಂದುಕೊಂಡಂತಹ ಉತ್ತಮ ಫಲಗಳು ಪ್ರಾಪ್ತಿಯಾಗುವವು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಉತ್ತಮ ತಯಾರಿಯೊಂದಿಗೆ ಯೋಜನೆಯನ್ನು ರೂಪಿಸುವುದರಿಂದ ನಿಮ್ಮ ವಿರೋಧಿಗಳ ವಿರುದ್ಧ ಯಶಸ್ಸನ್ನು ಗಳಿಸುವಿರಿ. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸುವಿರಿ ಮತ್ತು ನಿಮ್ಮ ಜವಾಬ್ದಾರಿಗಳಿಂದ ಮುಕ್ತಿ ಪಡೆಯುವಿರಿ. ರಚನಾತ್ಮಕ ಕಾರ್ಯಗಳಿಗೆ ಸಂಬಂಧಿಸಿದ ಜನರು ಹೆಚ್ಚಿನ ಜನಪ್ರಿಯತೆಯನ್ನು ಪಡೆಯುವರು. ಕಲೆಗೆ ಸಂಬಂಧಿಸಿದಂತಹ ಜನರು ಉತ್ತಮ ಹೆಸರನ್ನು ಗಳಿಸುವರು. ಜತೆಗೆ ಮನೆಯಲ್ಲಿ ಮೋಜು ಮಸ್ತಿಯ ವಾತಾವರಣವಿರಲಿದೆ. ತಂದೆ, ತಾಯಿ ಮತ್ತು ಸಂಗಾತಿಯ ಸಂಪೂರ್ಣ ಬೆಂಬಲ ದೊರಕುವುದರಿಂದ ಮಾನಸಿಕವಾಗಿ ಸಾಕಷ್ಟು ಬಲದಿಂದಿರುವಿರಿ.

TAGGED:GajakesariParivartana Yoga: Huge auspicious results for people of these five zodiac signsToday VriddhiTrigrahi
Share This Article
Facebook Twitter Copy Link Print
Previous Article Power outages today and tomorrow ಇಂದು, ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Next Article Young man killed lover ವಿವಾಹಿತ ಪ್ರಿಯತಮೆ ಕೊಂದು ಚಿನ್ನಾಭರಣ ದೋಚಿ ಹೊಲದಲ್ಲಿ ಬಚ್ಚಿಟ್ಟ ಯುವಕ! ಆರೋಪಿ ಬಂಧನ

Popular Posts

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

You Might Also Like

ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read
ಪ್ರಮುಖಕರ್ನಾಟಕ

Train tragedy ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿದ ಯುವಕ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?