newsics.com
ತುಮಕೂರು: ಬಾಯ್ ಫ್ರೆಂಡ್ ಜೊತೆಗೆ ಗಲಾಟೆ ಮಾಡಿಕೊಂಡು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗ್ರಾಮಾಂತರ ಹೊಸಹಳ್ಳಿಯಲ್ಲಿ ನಡೆದಿದೆ. ಚೈತನ್ಯ (22) ಮೃತ ಯುವತಿ.
ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿವಾಸಿಯಾದ ಚೈತನ್ಯ ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನ ಜೊತೆಗೆ ಪ್ರೀತಿ ಮಾಡುತ್ತಿದ್ದಳಂತೆ. ಚೈತನ್ಯಳನ್ನು ಪ್ರೀತಿಸುತ್ತಿದ್ದ ಯುವಕ ವಿಜಯ್ ಕುಮಾರ್ ಕಾರು ಚಾಲಕನಾಗಿದ್ದ.
ಇತ್ತೀಚೆಗೆ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಚೈತನ್ಯ ಫೋಟೋ ತೆಗೆದಿದ್ದ. ಹೀಗೆ ತೆಗೆದಿದ್ದ ಫೋಟೋಗಳ ರೀಲ್ಸ್ ಅನ್ನು ಚೈತನ್ಯ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಳಂತೆ. ಈ ರೀಲ್ಸ್ ಸ್ಟೇಟಸ್ ಹಾಕಿದ್ದಕ್ಕೆ ಲವರ್ ವಿಜಯ್ ಕುಮಾರ್ ಕೋಪಗೊಂಡಿದ್ದಾನೆ. ಇದೇ ವಿಚಾರ ಪ್ರಶ್ನಿಸಲು ನಿನ್ನೆ ರಾತ್ರಿ ಚೈತನ್ಯ ಮನೆ ಬಳಿ ವಿಜಯ್ ಬಂದಿದ್ದನಂತೆ. ಆಗ ರೂಂನಲ್ಲಿದ್ದರೂ ಬಾಗಿಲು ಚಿಲಕ ಹಾಕಿ, ಕಿಟಕಿ ಬಳಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.
ಇದಾದ ಕೆಲವು ಗಂಟೆಗಳ ಬಳಿಕ ಚೇತನ್ಯ ನೇಣಿ ಹಾಕಿಕೊಂಡು ಜೀವಬಿಟ್ಟಿದ್ದಾಳೆ. ಸದ್ಯ ಈ ಘಟನೆ ಸಂಬಂಧ ತುಮಕೂರು ಗ್ರಾ.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.