newsics.com
ಫ್ರಾನ್ಸ್‌ನ ವಾರ್ಷಿಕ ಬೀದಿ ಸಂಗೀತ ಉತ್ಸವ ‘ಫೆಟೆ ಡೆ ಲಾ ಮ್ಯೂಸಿಕ್’ ಸಂದರ್ಭದಲ್ಲಿ ದೇಶಾದ್ಯಂತ ನೂರಾರು ಮಂದಿ ಮೇಲೆ ಸಿರಿಂಜ್ ಅಟ್ಯಾಕ್ ಮಾಡಿದ್ದಾರೆ.
145 ಮಂದಿಗೆ ಸಿರಿಂಜ್ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಘಟನೆ ಸಂಬಂಧ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಫ್ರಾನ್ಸ್ನಾದ್ಯಂತ ಲಕ್ಷಾಂತರ ಜನರು ಫೆಟೆ ಡೆ ಲಾ ಮ್ಯೂಸಿಕ್ ನಲ್ಲಿ ಮೈ ಮರೆತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಕಂಡ ಕಂಡವರ ಮೇಲೆ ಸಿರಿಂಜನ್ ದಾಳಿ ನಡೆಸಿದ್ದಾರೆ. ಸಿರಿಂಜನ್ ದಾಳಿಯಿಂದ ಅಸ್ವಸ್ಥಗೊಂಡು ಹಲವರು ಆಸ್ಪತ್ರೆ ಸೇರಿದ್ದಾರೆ. ಹಾಗೂ ಪ್ಯಾರಿಸ್ನಲ್ಲಿ, 15 ವರ್ಷದ ಬಾಲಕಿ ಮತ್ತು 18 ವರ್ಷದ ಪುರುಷ ಸೇರಿದಂತೆ ಮೂವರು ವ್ಯಕ್ತಿಗಳಿಗೆ ಇರಿಯಲಾಗಿದೆ ಪ್ಯಾರಿಸ್ನ ಮೂರು ವಿಭಿನ್ನ ಸ್ಥಳಗಳಲ್ಲಿ ಇರಿತದ ವರದಿಯಾದ ನಂತರ ತನಿಖೆಗಳನ್ನು ತೆರೆಯಲಾಯಿತು ಎಂದು ಪ್ರಾಸಿಕ್ಯೂಟರ್ಗಳು ತಿಳಿಸಿದ್ದಾರೆ.