newsics.com
ಸಾಂಗ್ಲಿ: ಮಗಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ಕೋಪಗೊಂಡ ಶಿಕ್ಷಕ ಮಗಳನ್ನೇ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಅಟ್ಟಾಡಿ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ.
ಧೋಂಡಿರಾಮ್ ಭೋಸಲೆ (45) ಮಗಳು ಸಾಧಾನಳನ್ನು ಹತ್ಯೆ ಮಾಡಿದ್ದಾನೆ. ಮಗಳು ಸಾಧಾನ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ ಎಂದು ತೀವ್ರ ಅಸಮಾಧಾನಗೊಂಡಿದ್ದ ಭೋಸಲೆ, ಇದೇ ವಿಚಾರವಾಗಿ ಮಗಳ ಜೊತೆ ಜಗಳವಾಡಿದ್ದ.
ಹೆಂಡತಿ ಹಾಗೂ ಮಗನ ಎದುರಲ್ಲೇ ಹಿಟ್ಟು ರುಬ್ಬುವ ಕಲ್ಲಿನ ಮರದ ಹಿಡಿಕೆಯಿಂದ ಮಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಾಧನಾ ಸ್ಥಿತಿ ಚಿಂತಾಜನಕವಾಗಿತ್ತು.ಆಕೆಯನ್ನು ಸಾಂಗ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.