newsics.com
ಮೈಸೂರು: ಬಟ್ಟೆ ವ್ಯಾಪಾರಿ ದಿನೇಶ್ ಎಂಬುವವರಿಗೆ ಹನಿಟ್ರ್ಯಾಪ್ ಮಾಡಿರೋ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ವಾಟ್ಸ್ ಌಪ್ನಲ್ಲಿ ಬಟ್ಟೆ ವ್ಯಾಪಾರಿ ದಿನೇಶ್ಗೆ ಸುಂದರಿಯಿಂದ ಕಲರ್ ಕಲರ್ ಮೆಸೇಜ್ ಬಂದಿತ್ತು.ಮೆಸೇಜ್ ನೋಡಿ ಆಕೆ ಮನೆಗೆ ದಿನೇಶ್ ಕುಮಾರ್ ಹೋಗಿದ್ದರು.ಮನೆ ಬಾಗಿಲು ತೆರೆದು ರೂಂಗೆ ಬರ್ತಿದ್ದಂತೆ ಲಾಕ್ ಮಾಡಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಈ ಹನಿಟ್ರ್ಯಾಪ್ ಕೇಸ್ನಲ್ಲಿ ಪೊಲೀಸರೇ ಭಾಗಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಪೊಲೀಸ್ ಇಲಾಖೆಯೇ ಆಘಾತಕ್ಕೊಳಗಾಗಿದ್ದು, ಪಿರಿಯಾಪಟ್ಟಣ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಮ್ಮನ ಮನೆ ಒಳಗೆ ಬಟ್ಟೆ ವ್ಯಾಪಾರಿ ಹೋಗುತ್ತಿದ್ದಂತೆ ಯುವತಿ ರೂಂನ ಲಾಕ್ ಮಾಡಿಕೊಂಡಿದ್ದಳು. ಇಬ್ಬರು ರೂಂ ಒಳಗಿದ್ದಾಗ ಏಕಾಏಕಿ ಕೊಠಡಿ ಬೀಗ ಒಡೆದು ಯುವತಿಯ ಗ್ಯಾಂಗ್ ಒಳಪ್ರವೇಶಿಸಿದೆ. ಬಟ್ಟೆ ವ್ಯಾಪಾರಿಗೆ ಹಿಗ್ಗಾಮುಗ್ಗ ಥಳಿಸಿರುವ ಯುವತಿ ಗ್ಯಾಂಗ್ ರೂಂಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿದೆ. ಯುವತಿಯನ್ನ ಬಿಡಲು 10 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ.
ಇನ್ನೂ ಹನಿಟ್ರ್ಯಾಪ್ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಎ1 ಮೂರ್ತಿ, ಎ2 ಶಿವಣ್ಣ (ಪೊಲೀಸ್ ಸಿಬ್ಬಂದಿ), ಮತ್ತು ಇತರ ಮೂವರು ಎಂದು ಗುರುತಿಸಲಾಗಿದೆ. ಶಿವಣ್ಣನಂತಹ ಪೊಲೀಸ್ ಸಿಬ್ಬಂದಿಯೊಬ್ಬರೇ ಈ ಅಪರಾಧದಲ್ಲಿ ಭಾಗಿಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.