newsics.com
ಮದುವೆಯಾಗುವಾಗ ಬಹಳ ಜಾಗರೂಕರಾಗಿರಬೇಕು, ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ನೀವು ಕೂಡಾ ಮದುವೆಯಾಗಲು ಯೋಜಿಸುತ್ತಿದ್ದರೆ, ಅದರಲ್ಲೂ ಅರೇಂಜ್ ಮ್ಯಾರೇಜ್ ಆಗ್ತಿದ್ದೀರಿ ಎಂದಾದ್ರೆ ಮದುವೆಗೂ ಮುಂಚೆ, ನಿಮ್ಮ ಬಾಳ ಸಂಗಾತಿಯಾಗುವವಳ ಬಗ್ಗೆ ಒಂದಷ್ಟು ವಿಷಯಗಳ ಬಗ್ಗೆ ಚರ್ಚಿಸುವುದ, ಹುಡುಗಿಯ ಬಗ್ಗೆ ಒಂದಷ್ಟು ವಿಷಯಗಳ ಬಗ್ಗೆ ತಿಳಿಯುವುದು ಅವಶ್ಯಕ.
ಈ ಮದುವೆ ಇಷ್ಟವಿದೆಯೋ ಇಲ್ವೋ: ಕೆಲವೊಂದು ಬಾರಿ ಹುಡುಗಿಯರಿಗೆ ಆಕೆಯ ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸುವ ಸಾಧ್ಯತೆ ಇರುತ್ತದೆ. ಕುಟುಂಬದವರು ಮಾಡುವ ಈ ತಪ್ಪಿನಿಂದ ಸಂಸಾರ, ಹುಡುಗನ ಬಾಳು ಹಾಳಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಘಟನೆಗಳು ಕೂಡಾ ನಡೆದಿವೆ. ಅದಕ್ಕಾಗಿಯೇ ಮದುವೆಗೂ ಮುಂಚೆ ನೀವು ಮದುವೆಯಾಗಬೇಕಾದ ಹುಡುಗಿಯ ಜೊತೆ ಮುಕ್ತವಾಗಿ ಮಾತನಾಡಿ ಮತ್ತು ಆಕೆಗೆ ಮದುವೆ ಇಷ್ಟವಿದೆಯೋ, ಇಲ್ವೋ ಎಂಬುದನ್ನು ತಿಳಿದುಕೊಳ್ಳಿ.
ಹಿಂದಿನ ಜೀವನದ ಬಗ್ಗೆ ಚರ್ಚಿಸಿ: ನೀವು ಮದುವೆಯಾಗಬೇಕಾದ ಹುಡುಗಿಯ ಹಿಂದಿನ ಜೀವನದ ಬಗ್ಗೆ ತಿಳಿಯುವುದು ಕೂಡಾ ಅವಶ್ಯಕ. ಆಕೆಯೊಂದಿಗೆ ಮುಕ್ತವಾಗಿ ಮಾತನಾಡುವ ಮೂಲಕ ಆಕೆಯ ಹಿಂದಿನ ಪ್ರೇಮ ಜೀವನದ ಬಗ್ಗೆ ತಿಳಿದುಕೊಳ್ಳಿ. ಜೊತೆಗೆ ನಿಮ್ಮ ಹಿಂದಿನ ಪ್ರೇಮಕಥೆಯ ಬಗ್ಗೆ ಆಕೆಯ ಬಳಿ ಹೇಳಿಕೊಳ್ಳಿ. ಇದರಿಂದ ಮುಂದಿನ ಜೀವನವೂ ಯಾವುದೇ ಅನುಮಾನವಿಲ್ಲದೆ ಸುಂದರವಾಗಿ ಸಾಗುತ್ತದೆ.
ಪ್ರೀತಿಯ ಬಗ್ಗೆ ವಿಚಾರಿಸಿ: ನಿಮಗೆ ಮದುವೆ ನಿಶ್ಚಯವಾಗಿದೆ ಎಂದಾದ್ರೆ ಆ ಹುಡುಗಿಯ ಜೊತೆ ಮಾತನಾಡಿ, ಆಕೆಯ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾಳಾ ಎಂಬುದರ ಬಗ್ಗೆ ತಿಳಿಯಿರಿ. ಜೊತೆಗೆ ಆಕೆ ಪೋಷಕರ ಒತ್ತಾಯಕ್ಕೆ ಮದುವೆಯಾಗಿದ್ದಾಳೋ ಅಥವಾ ಮನಸ್ಪೂರ್ವಕವಾಗಿ ಮದುವೆಗೆ ಒಪ್ಪಿಗೆ ನೀಡಿದ್ದಾಳೋ ಎಂಬುದನ್ನು ಕೂಡಾ ತಿಳಿಯಿರಿ.
ಹುಡುಗಿಯ ಬಗ್ಗೆ ಆಕೆಯ ಪರಿಚಯದವರೊಂದಿಗೂ ವಿಚಾರಿಸಬಹುದು: ಮದುವೆ ಅನ್ನೋದು ಜೀವನಪರ್ಯಂತ ಸಾಗುವ ಸಂಬಂಧವಾದ ಕಾರಣ ಜೀವನ ಸಂಗಾತಿಯನ್ನು ಬಹಳ ಎಚ್ಚರದಿಂದ ಆರಿಸಬೇಕು. ಹಾಗಾಗಿ ನೀವು ಮದುವೆಯಾಗುವ ಹುಡುಗಿಯ ಬಗ್ಗೆ, ಆಕೆಯ ಪೂರ್ವಪರವನ್ನು ಆಕೆಯ ಪರಿಚಯದವರ ಜೊತೆ ವಿಚಾರಿಸಿ ನೋಡುವುದು ತಪ್ಪೇನಿಲ್ಲ.
ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಚರ್ಚಿಸಿ: ಮದುವೆಗೆ ಮೊದಲು ಹೆಚ್ಚಿನವರು ಬಾಳ ಸಂಗಾತಿಯಾಗುವವರ ಜೊತೆ ಒಂದಷ್ಟು ವಿಷಯಗಳ ಬಗ್ಗೆ ಅಂದರೆ ಕೆಲಸ, ಹವ್ಯಾಸ, ಕುಟುಂಬದ ಬಗ್ಗೆ ಪ್ರಶ್ನೆ ಕೇಳಬೇಕು ಎಂದುಕೊಳ್ಳುತ್ತಾರೆ. ನಿಮ್ಮ ಮನದಲ್ಲೂ ಇಂತಹ ಪ್ರಶ್ನೆಗಳಿದ್ದರೆ, ಅವುಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ.
Ear Hair Growth: ಕಿವಿಯಲ್ಲಿ ಕೂದಲು ಏಕೆ ಬೆಳೆಯುತ್ತವೆ?; ಅದೃಷ್ಟವೋ? ದುರಾದೃಷ್ಟವೋ?