newsics.com
ಕಾರವಾರ: ಮನೆಯ ಬಳಿ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಆಕಸ್ಮಿಕವಾಗಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ತೌಸಿಫ್ ಹಾಗೂ ಅರ್ಜು ದಂಪತಿಯ ಎರಡು ವರ್ಷದ ಮಗಳು ಆಟವಾಡುತ್ತಾ ಒಬ್ಬಳೇ ಮನೆಯಿಂದ ಹೊರಬಂದಿದ್ದಾಳೆ. ಹೀಗೆ ಬಂದವರು ಮನೆಯ ಬಳಿ ನಾಲೆ ಬಳಿ ಹೋಗಿದ್ದರೂ ಪೋಷಕರು ಗಮನಿಸಿಲ್ಲ. ಆಕಸ್ಮಿಕವಾಗಿ ಮಗು ನಾಲೆಗೆ ಬಿದ್ದಿದ್ದಾಳೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಲು ಯತ್ನಿಸಿ ಮೇಲಕೆತ್ತಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಬದುಕುಳಿಯಲಿಲ್ಲ.
ಮಗು ಆಟವಾಡುತ್ತಾ ಮನೆಯ ಬಳಿಯ ನಾಲೆಯತ್ತ ಹೋಗುತ್ತಿರುವ ಸಿಸಿಕ್ಯಾಮರಾದ ದೃಶ್ಯ ಬೆಳಕಿಗೆ ಬಂದಿದೆ.