newsics.com
ಗುಜರಾತ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡು ಭಾರೀ ಅನಾಹುತ ಸೃಷ್ಟಿಸಿದೆ. ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ ಐದು ನಿಮಿಷದಲ್ಲಿ ವಿಮಾನ ಪತನಗೊಂಡಿದೆ.
ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ 242 ಪ್ರಯಾಣಿಕರೊಂದಿಗೆ ಟೇಕ್ ಆಪ್ ಆಗಿತ್ತು. ಅದರಲ್ಲಿ 230 ಪ್ರಯಾಣಿಕರು, 10 ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ಸ್ ಇದ್ದರು. ಇಂದು ಮಧ್ಯಾಹ್ನ 1.38ಕ್ಕೆ ಸರಿಯಾಗಿ ವಿಮಾನ ಟೇಕ್-ಆಫ್ ಆಗಿತ್ತು
ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಪೈಲಟ್ ಮತ್ತು ಫಸ್ಟ್ ಆಫೀಸರ್ ಹೊರತುಪಡಿಸಿ, ವಿಮಾನದಲ್ಲಿ 10 ಸಿಬ್ಬಂದಿ ಇದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ವಿಮಾನವು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಮಂಗಳೂರು ಮೂಲದ ಕನ್ನಡಿಗ ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿತ್ತು.1100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು ಕ್ಲೈವ್. ಜೂನ್ 12 ರಂದು ಅಹಮದಾಬಾದ್‌ನಲ್ಲಿ ದುರಂತವಾಗಿ ಪತನಗೊಂಡ ಏರ್ ಇಂಡಿಯಾ ವಿಮಾನ AI 171 ರಲ್ಲಿ ಮುಂಬೈ ನಿವಾಸಿ ಮತ್ತು ಮಂಗಳೂರು ಮೂಲದವರಾದ ಕ್ಲೈವ್ ಕುಂದರ್ ಮೊದಲ ಅಧಿಕಾರಿಯಾಗಿದ್ದರು. 1,100 ಗಂಟೆಗಳ ಹಾರಾಟದ ಅನುಭವದೊಂದಿಗೆ, ಕ್ಲೈವ್ 8,200 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿರುವ ಅನುಭವಿ ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು.
ಬೋಯಿಂಗ್ 787 ವಿಮಾನವು ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ವಿಮಾನ ಟೇಕಾಫ್ ಆದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ ‘ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು.