newsics.com
ಸೋಶಿಯಲ್ ಮೀಡಿಯಾದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ತಾರೆ ಖಾಬಿ ಲೇಮ್ ಯುಎಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಕಳೆದ ಶುಕ್ರವಾರ ನೆವಾಡಾದಲ್ಲಿ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ)ಇಲಾಖೆ, ವೀಸಾ ಅವಧಿ ಮುಗಿದ ನಂತರವೂ ಉಳಿದುಕೊಂಡಿದ್ದಕ್ಕಾಗಿ ಬಂಧಿಸಿದ್ದು, ಆ ಬಳಿಕ ಸ್ವಯಂಪ್ರೇರಿತ ನಿರ್ಗಮನಕ್ಕೆ ಅವಕಾಶ ನೀಡಿದ ನಂತರ ಅದೇ ದಿನ ಬಿಡುಗಡೆ ಮಾಡಲಾಗಿದೆ.
ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆ, ಇಟಲಿಯ ನಾಗರಿಕ ಸೆರಿಂಗೆ ಖಬಾನೆ ಲೇಮ್ (25) ಅವರನ್ನು ಜೂನ್ 6 ರಂದು ನೆವಾಡಾದ ಲಾಸ್ ವೇಗಾಸ್‌ನಲ್ಲಿರುವ ಹ್ಯಾರಿ ರೀಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಉಲ್ಲಂಘನೆಗಾಗಿ ಬಂಧಿಸಿ ಅದೆ ದಿನ ಬಿಡುಗಡೆ ಮಾಡಲಾಗಿದೆ ಎಂದು ಐಸಿಇ ಹೇಳಿಕೆಯಲ್ಲಿ ತಿಳಿಸಿದೆ.
ಲೇಮ್ ಏಪ್ರಿಲ್ 30 ರಂದು ಅಮೆರಿಕಕ್ಕೆ ಪ್ರವೇಶಿಸಿದ್ದು, ಅವರ ವೀಸಾದ ನಿಯಮಗಳನ್ನು ಮೀರಿದ್ದರು ಎಂದು ಸಂಸ್ಥೆ ತಿಳಿಸಿದೆ.
ಖಾಬಿ ಲೇಮ್ ಯಾರು?
ಸೆನೆಗಲ್‌ನಲ್ಲಿ ಜನಿಸಿದ ಲೇಮ್ ಒಬ್ಬ ಇಟಾಲಿಯನ್ ಪ್ರಜೆಯಾಗಿದ್ದು, ಅವರು 162.2 ಮಿಲಿಯನ್ ಫಾಲೋವರ್ಸ್‌ನೊಂದಿಗೆ ಅತ್ಯಂತ ಜನಪ್ರಿಯ ಟಿಕ್‌ಟಾಕ್ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಲ್ಲಿ ಅಗ್ರ ಸ್ಥಾನ ಹೊಂದಿದ್ದಾರೆ.
COVID-19 ಸಾಂಕ್ರಾಮಿಕ ಸಮಯದಲ್ಲಿ ಅವರು ಇಂಟರ್ನೆಟ್‌ನಲ್ಲಿ ಹೇರಳವಾಗಿರುವ ಸಂಕೀರ್ಣ ಟ್ಯುಟೋರಿಯಲ್‌ಗಳು ಮತ್ತು ಸಲಹೆಗಳನ್ನು ಅಪಹಾಸ್ಯ ಮಾಡುವ ತಮ್ಮ ಮೌನ ವೀಡಿಯೊಗಳ ಮೂಲಕ ಮನ್ನಣೆ ಗಳಿಸಿದರು.
ಫೋರ್ಬ್ಸ್ ಪ್ರಕಾರ, ಅವರ ಪೋಸ್ಟ್‌ಗಳು ವೇಗವಾಗಿ ವೈರಲ್ ಆಗಿದ್ದು, ಜೂನ್ 2022 ಮತ್ತು ಸೆಪ್ಟೆಂಬರ್ 2023 ರ ನಡುವಿನ ಅವಧಿಯಲ್ಲಿ ಕಂಪನಿಗಳೊಂದಿಗೆ ಮಾರ್ಕೆಟಿಂಗ್ ಒಪ್ಪಂದಗಳ ಮೂಲಕ ಅಂದಾಜು $16.5 ಮಿಲಿಯನ್ ಗಳಿಸಲು ಅವರಿಗೆ ಸಹಾಯ ಮಾಡಿದೆ.
BBK12: ಬಿಗ್ ಬಾಸ್ ನಿರೂಪಣೆ ಮಾಡಲು ಖಡಕ್ ಕಂಡಿಷನ್ಸ್ ಹಾಕಿದ ಕಿಚ್ಚ ಸುದೀಪ್; ಏನದು?
Vasthu Tips: ಮನೆಯ ಮೆಟ್ಟಿಲುಗಳ ಕೆಳಗೆ ಶೌಚಾಲಯ ಕಟ್ಟಲೇಬಾರದು; ಯಾಕೆ?