newsics.com
ನವದೆಹಲಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ತಹವ್ವೂರ್ ರಾಣಾಗೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಕೋರ್ಟ್ ಅನುಮತಿ ನೀಡಿದೆ.
ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತಿದೆ. ತಹವ್ವೂರ್ ರಾಣಾ 26/11 ಮುಂಬೈ ದಾಳಿಯಲ್ಲಿ ಆರೋಪಿಯಾಗಿದ್ದಾನೆ.
ಅರ್ಜಿಯ ವಿಚಾರಣೆ ನಡೆಸಿದಂತ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಕುಟುಂಬಸ್ಥರಿಗೆ ಕರೆ ಮಾಡಿ ಪೋನ್ ಮೂಲಕ ಮಾತನಾಡಲು ಉಗ್ರ ಉಗ್ರ ತಹವ್ವೂರ್ ರಾಣಾಗೆ ಅವಕಾಶ ನೀಡಿದೆ.
ಉಗ್ರ ಉಗ್ರ ತಹವ್ವೂರ್ ರಾಣಾ ಮಾತನಾಡುವಾಗ ಜೈಲಾಧಿಕಾರಿ ಸಹ ಇರುವಂತೆ ಷರತ್ತು ವಿಧಿಸಲಾಗಿದೆ.