newsics.com
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಆರ್ಸಿಬಿ ಅಂದ್ರೆ ಕೊಹ್ಲಿ.. ಕೊಹ್ಲಿ ಅಂದ್ರೆ ಆರ್ಸಿಬಿ.. ಆರ್ಸಿಬಿ ಅನ್ನೋದು ಆಕರ್ಷಣೆಯಾಗಿದ್ದೇ ವಿರಾಟ್ ಕೊಹ್ಲಿ ಅಯಸ್ಕಾಂತದಿಂದಾಗಿ. ಜೆರ್ಸಿ ನಂಬರ್ 18ರ ಒಡೆಯ ಕೊಹ್ಲಿಗಾಗಿ 18ನೇ ಸೀಸನ್ನ ಕಪ್ ಗೆಲ್ಲಬೇಕು ಅನ್ನೋದು ಎಲ್ಲರ ಆಸೆಯಾಗಿದೆ.
ಪಂಜಾಬ್ ವಿರುದ್ಧದ ಪಂದ್ಯ ಗೆದ್ದ ಬೆನ್ನಲ್ಲೇ ಆರ್ಸಿಬಿ ಡಗೌಟ್ನಲ್ಲಿದ್ದ ಕೊಹ್ಲಿ ಸಂಭ್ರಮದ ಕಡಲಲ್ಲಿ ತೇಲಾಡಿದ್ರು. ಜಂಪ್ ಮಾಡಿ ಸೆಲಬ್ರೇಟ್ ಮಾಡಿದ ವಿರಾಟ್ ಕೊಹ್ಲಿ ಇದೇ ವೇಳೆ ಸ್ಟ್ಯಾಂಡ್ನಲ್ಲಿದ್ದ ಪ್ರೀತಿಯ ಪತ್ನಿ ಅನುಷ್ಕಾ ಶರ್ಮಾ ಕಡೆ ಸನ್ನೆ ಮಾಡಿದ್ರು. ONE MORE TO GO.., YES..! ನನ್ನ ಕನಸು ನನಸಾಗೋಕೆ ಒಂದೇ ಹೆಜ್ಜೆ ಬಾಕಿ ಎಂಬರ್ಥದಲ್ಲಿ ಕೊಹ್ಲಿ ಸನ್ನೆ ಮಾಡಿದ್ರು. ಕೊಹ್ಲಿಯ ಈ ಸಂದೇಶ, ಹಾಗೂ ಈ ಸೀಸನ್ನಲ್ಲಿ ಕೊಹ್ಲಿ ಆಡ್ತಿರೋ ಆಟ ಅಭಿಮಾನಿಗಳ ವಲಯದಲ್ಲಿ ಕಪ್ ನಮ್ದಾಗುತ್ತೆ ಅನ್ನೋ ಆಸೆಯನ್ನ ದುಪ್ಪಟ್ಟು ಮಾಡಿ
ದೆ.