newsics.com
ಚೆನ್ನೈ : ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಮಲ್ ಹಾಸನ್ ಮತ್ತೆ ಉದ್ಧಟತನ ಮೆರೆದಿದ್ದಾರೆ.ಕನ್ನಡಿಗರ ತೀವ್ರ ಆಕ್ರೋಶದ ಬಳಿಕವೂ ನಟ ಕಮಲ್ ಹಾಸನ್ ಅವರು ಮತ್ತೊಮ್ಮೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
ಚೆನ್ನೈನಲ್ಲಿ ಇಂದು ಮಾತನಾಡಿದ ಕಮಲ್ ಹಾಸನ್, ನಾನು ಕ್ಷಮೆ ಕೇಳಲ್ಲ. ನಾನು ತಪ್ಪು ಮಾಡಿದ್ದರೆ ಮಾತ್ರ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.ಇದು ಪ್ರಜಾ ಪ್ರಭುತ್ವ ರಾಷ್ಟ್ರ, ನನಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದಾರೆ.ನನಗೆ ಕೇರಳ, ಕರ್ನಾಟಕದ ,ಆಂಧ್ರ ಮೇಲಿರೋ ಪ್ರೀತಿ ನಿಜವಾದದ್ದು. ನಾನು ಕೆಲವು ಅಜೆಂಡಾ ಇಟ್ಕೊಂಡಿರೋ ವ್ಯಕ್ತಿಗಳ ಬೆದರಿಕೆಗೆ ಬಗ್ಗಲ್ಲ ಎಂದು ಹೇಳಿದ್ದಾರೆ.