newsics.com
ನಡುರಸ್ತೆಯಲ್ಲೇ ಯುವಕನಿಗೆ ಮೂವರು ಯುವತಿಯರು ಸೇರಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆದರೆ ಯುವತಿಯರು ಈ ಯುವಕನಿಗೆ ಯಾಕೆ ಹೊಡೆದಿದ್ದಾರೆ ಎಂದು ತಿಳಿದಿಲ್ಲ.
ಈ ವಿಡಿಯೋದಲ್ಲಿ ನಡುರಸ್ತೆಯಲ್ಲೇ ಯುವಕನೊಬ್ಬನಿಗೆ ಯುವತಿಯರು ಥಳಿಸಿದ್ದಾರೆ. ಈ ಯುವತಿಯರಿಬ್ಬರೂ ಆತನ ಹೊಟ್ಟೆಗೆ ಒದೆಯುತ್ತಿರುವುದನ್ನು ನೋಡಬಹುದು. ಮತ್ತೊಬ್ಬ ಯುವತಿಯೂ ಮನ ಬಂದಂತೆ ಕೆನ್ನೆಗೆ ಪಟಪಟನೆ ಬಾರಿಸುತ್ತಿರುವುದನ್ನು ಕಾಣಬಹುದು.
@gharkekalesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.ಈ ವಿಡಿಯೋ ಈವರೆಗೆ ಒಂದು ಲಕ್ಷ ಇಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸದ್ಯ ಈ ವಿಡಿಯೋ ನೋಡಿ ಬಳಕೆದಾರರು ಕಾಮೆಂಟ್ಗಳನ್ನು ಮಾಡಿದ್ದಾರೆ.