newsics.com
ನವದೆಹಲಿ: ಮುಂಗಾರು ಮಳೆಯ ಆರ್ಭಟ ಶುರುವಾಗುತ್ತಿದ್ದಂತೆ ಕೇಂದ್ರ ಸರ್ಕಾರ ದೇಶದ ರೈತರಿಗೆ ಬಂಪರ್ ಸುದ್ದಿ ನೀಡಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಇಂದು ಖಾರೀಫ್ ಹಂಗಾಮಿನ ಬೆಳೆಗಳಿಗೆ MSP (ಕನಿಷ್ಠ ಬೆಂಬಲ ಬೆಲೆ) ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.ರಾಗಿ, ಹತ್ತಿ, ಎಳ್ಳು ಸೇರಿದಂತೆ 14 ಬೆಳೆಗಳ ಬೆಂಬಲ ಬೆಂಬಲ ಹೆಚ್ಚಳ ಮಾಡಲಾಗಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಖಾರೀಫ್ ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲು ಕ್ಯಾಬಿನೆಟ್ ತೀರ್ಮಾನಿಸಿದೆ. ರೈತರ ಬೆಳೆಯ ಖರ್ಚಿನ ಮೇಲೆ ಶೇ.50ರಷ್ಟು ಲಾಭ ಬರುವಂತೆ MSP ನಿಗದಿ ಮಾಡಿದ್ದು, 2.07 ಲಕ್ಷ ಕೋಟಿ ರೂಪಾಯಿ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ.
ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ವೆಚ್ಚಕ್ಕಿಂತ 50% ಲಾಭದ ಅಂತರವನ್ನು ಖಚಿತಪಡಿಸುತ್ತದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ 2025–26ರ ಋತುವಿನ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬೆಳೆಗಳ ಅಂದಾಜು ಖರೀದಿ ವೆಚ್ಚವು 2.07 ಲಕ್ಷ ಕೋಟಿ ರೂ.ಗಳಷ್ಟಿದೆ.