newsics.com
ಪಬ್‌ನಿಂದ ಹೊರಬಂದ ನಂತರ ಕುಡಿದ ಮತ್ತಿನಲ್ಲಿ ಇಬ್ಬರು ಯುವತಿಯರು ಒಬ್ಬರಿಗೊಬ್ಬರು ಹೊಡೆಯುತ್ತಾ, ಕೂದಲು ಹಿಡಿದು ಎಳೆದಾಡುತ್ತಾ, ಬಾಯಿಗೆ ಬಂದಂತೆ ಬೈಯುತ್ತಿರುವುದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದೋರ್‌ನ ವಿಜಯನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮೇ 18 ರ ರಾತ್ರಿ ಆಕೆ ಮತ್ತು ಆಕೆಯ ಸ್ನೇಹಿತೆ ಬುಲ್ಬುಲ್ ಒಂದು ಕ್ಲಬ್‌ಗೆ ಪಾರ್ಟಿಗಾಗಿ ಹೋಗಿದ್ದರು. ರಾತ್ರಿ 12:15 ರ ಸುಮಾರಿಗೆ, ಅವರು ಕ್ಲಬ್‌ನಿಂದ ಹೊರಬಂದು ಮೆಟ್ಟಿಲುಗಳ ಮೂಲಕ ಕೆಳಗಿಳಿಯುತ್ತಿದ್ದಾಗ, ಮೂರರಿಂದ ನಾಲ್ಕು ಹುಡುಗರು ಮತ್ತು ಒಬ್ಬ ಹುಡುಗಿಯ ಗುಂಪು ಅವರ ಹಿಂದೆಯೇ ಇತ್ತು. ಅವರಲ್ಲಿ ಕಪ್ಪು ಶರ್ಟ್ ಧರಿಸಿದ್ದ ಹುಡುಗನೊಬ್ಬ ನೇಹಾಳ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದರಿಂದ ಕೆರಳಿದ ನೇಹಾ, ಆ ಹುಡುಗನನ್ನು ಎದುರಿಸಿ, ಸುಮ್ಮನೆ ಹೋಗುವಂತೆ ಕೇಳಿದ್ದಾಳೆ. ಆದರೆ, ಅವರು ಮಾಲ್‌ನ ಸೈಡ್ ಗೇಟ್ ತಲುಪಿದಾಗ, ಅದೇ ಗುಂಪು ಅವರನ್ನು ಹಿಂಬಾಲಿಸಿ ಅಸಭ್ಯ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದೆ. ಕೂಡಲೇ, ಆ ಗುಂಪು ನೇಹಾ ಮತ್ತು ಬುಲ್ಬುಲ್ ಇಬ್ಬರಿಗೂ ಪಂಚ್ ಮತ್ತು ಕಪಾಳಮೋಕ್ಷ ಮಾಡುವ ಮೂಲಕ ದೈಹಿಕ ಹಲ್ಲೆ ನಡೆಸಲು ಪ್ರಾರಂಭಿಸಿದೆ. ಇದಕ್ಕೆ ಪ್ರತಿಯಾಗಿ, ಈ ಇಬ್ಬರೂ ತಿರುಗಿಬಿದ್ದಿದ್ದು, ಎದುರು ಗುಂಪಿನ ಹುಡುಗಿಯರು ಕೂಡ ಜಗಳಕ್ಕೆ ಸೇರಿಕೊಂಡು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.