newsics.com
ಸ್ಟಾರ್ ನಟ ಯಶ್ ತಾಯಿ ‘ಕೊತ್ತಲವಾಡಿ’ ಸಿನಿಮಾ ನಿರ್ಮಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಸಿನಿಮಾ ಕೊತ್ತಲವಾಡಿ ಅನೌನ್ಸ್ ಮಾಡಿದ್ದಷ್ಟೇ ಅಲ್ಲದೆ ಈ ಸಿನಿಮಾದ ಒಂದು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಸಿಕ್ಕಾಪಟ್ಟೆ ಕುತೂಹಲವನ್ನು ಕೂಡಾ ಕ್ರಿಯೇಟ್ ಮಾಡಿದ್ದರು. ಇದೀಗ ಸಿನಿಮಾದ ಟೀಸರ್ ಕೂಡಾ ರಿಲೀಸ್ ಆಗಿದೆ.ಈ ಚಿತ್ರದ ಟೀಸರ್ ಲಾಂಚ್‌ನಲ್ಲಿ ಮಗ ಯಶ್ ಮತ್ತು ಸೊಸೆ ರಾಧಿಕಾ ಬಗ್ಗೆ ಮಾತನಾಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ಕೊತ್ತಲವಾಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆಯೇ, ಚರ್ಚಿಸಿದ್ದಾರೆಯೇ ಎಂದು ಕೇಳಲಾಯ್ತು. ಈ ಪ್ರಶ್ನೆಗೆ ಉತ್ತರಿಸಿದ ಪುಷ್ಪ ಅವರು ಸೊಸೆಯ ಬಗ್ಗೆ ಏನಂತ ಹೇಳಿದ್ದಾರೆ ಗೊತ್ತಾ? ಇದು ಯಾರಿಗೂ ಗೊತ್ತಿಲ್ಲ. ಮಗನಿಗೂ ಗೊತ್ತಿಲ್ಲ. ನಾನು ಹೊಸದಾಗಿ ಒಂದು ಚಿಕ್ಕ ಪ್ರಯತ್ನ ಮಾಡಿದ್ದೀನಿ, ನೋಡೋನ ಎಂದು ಅವರು ಹೇಳಿದರು.
ನಮ್ಮ ರಾಧಿಕಾ ತುಂಬಾ ಚೆನ್ನಾಗಿ ಕಥೆ ಸೆಲೆಕ್ಟ್ ಮಾಡುತ್ತಾಳೆ. ಕಥೆ ಆಯ್ಕೆ ಮಾಡೋದರಲ್ಲಿ ರಾಧಿಕಾ ಯಶ್‌ಗಿಂತಲೂ ಕಿಲಾಡಿ. ನನ್ನ ಸೊಸೆ ಆಗುವುದಕ್ಕೂ ಮೊದಲಿನಿಂದಲೂ ನಾನು ರಾಧಿಕಾಗೆ ಫ್ಯಾನ್. ಕಥೆ ವಿಚಾರದಲ್ಲಿ ತುಂಬಾ ಚೆನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆ ವಿಚಾರದಲ್ಲಿ ನಾನು ಅವಳಿಂದ ಕಲಿಯಬೇಕಾಗಿರೋದು ತುಂಬಾ ಇದೆ ಎಂದು ಸೊಸೆ ರಾಧಿಕಾ ಬಗ್ಗೆ ಪುಷ್ಪ ಅವರು ಹೊಗಳಿದ್ದಾರೆ.