Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Astrologer arrested ಪ್ರೇತಾತ್ಮ ಓಡಿಸಿ ಮದುವೆಯಾಗುವಂತೆ ಮಾಡುವುದಾಗಿ ಮಹಿಳಾ ಪೊಲೀಸ್‌ಗೆ ವಂಚನೆ: ಜ್ಯೋತಿಷಿ ಬಂಧನ
ಕರ್ನಾಟಕಪ್ರಮುಖ

Astrologer arrested ಪ್ರೇತಾತ್ಮ ಓಡಿಸಿ ಮದುವೆಯಾಗುವಂತೆ ಮಾಡುವುದಾಗಿ ಮಹಿಳಾ ಪೊಲೀಸ್‌ಗೆ ವಂಚನೆ: ಜ್ಯೋತಿಷಿ ಬಂಧನ

Share
2 Min Read
SHARE

newsics.com

ಬೆಂಗಳೂರು: ಪ್ರೇತಾತ್ಮ ಬಿಡಿಸಿ, ವಿವಾಹ ಯೋಗ ಕೂಡಿ ಬರುವ ಹಾಗೆ ಮಾಡುತ್ತೇನೆ. ಅದಕ್ಕೆ ವಿಶೇಷ ಪೂಜೆ ಮಾಡಿಸಬೇಕಾಗುತ್ತದೆ ಎಂದು ನಂಬಿಸಿ ಮಹಿಳಾ ಕಾನ್ಸ್‌ಟೆಬಲ್‌ವೊಬ್ಬರ ಬಳಿ 5.19 ಲಕ್ಷ ರೂ.ಪಡೆದು ವಂಚಿಸಿದ್ದ ಕಲಬುರಗಿಯ ಜ್ಯೋತಿಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿಯ ಹೇಮಂತ್‌ಭಟ್‌ ಬಂಧಿತ ಆರೋಪಿ. ಈತನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಹೇಮಂತ್‌ ಭಟ್ ಬೆಂಗಳೂರಿನಲ್ಲಿ ನೆಲೆಸಿರುವ 33 ವರ್ಷದ ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ನೇಹಿತೆಯೊಬ್ಬರ ಮುಖಾಂತರ ಹೇಮಂತ್‌ ಭಟ್‌ ಪರಿಚಿತನಾಗಿದ್ದ. ನಿಮ್ಮ ದೇಹದಲ್ಲಿ 15 ಆತ್ಮಗಳಿವೆ. ಅವುಗಳನ್ನು ದೇಹದಿಂದ ಓಡಿಸಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದಿದ್ದ. ಜತೆಗೆ, ವಿಶೇಷ ಪೂಜೆ ಮಾಡಲು ಪ್ರತ್ಯೇಕ ಕೊಠಡಿ ಇರಬೇಕು. ವಿಶೇಷ ಪೂಜೆ ಹಾಗೂ ವಶೀಕರಣ ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆ ಬಗೆಹರಿಯಲಿದೆ. ಜತೆಗೆ, ವಿವಾಹ ಯೋಗ ಕೂಡಿ ಬರಲಿದೆ ಎಂದು ಹೇಮಂತ್‌ ಭಟ್‌ ಭರವಸೆ ನೀಡಿದ್ದ.
ಹೇಮಂತ್‌ ಸೂಚನೆಯಂತೆ ಸಂತ್ರಸ್ತೆ ಹಂತ ಹಂತವಾಗಿ 5.19 ಲಕ್ಷ ರೂ. ನೀಡಿದ್ದರು.

ಸಮಸ್ಯೆಯಿಂದ ಮುಕ್ತಿ ಹೊಂದುವ ಸಲುವಾಗಿ ಸಂತ್ರಸ್ತೆ ಹೇಮಂತ್‌ ಭಟ್‌ನನ್ನು ನಗರಕ್ಕೆ ಕರೆಸಿದ್ದಳು. ಹೋಟೆಲ್‌ವೊಂದರಲ್ಲಿ ಕೊಠಡಿ ಬುಕ್‌ ಮಾಡಿ ತನ್ನಿಬ್ಬರು ಸ್ನೇಹಿತೆಯರ ಜತೆ ತೆರಳಿದ್ದರು. ಕೊಠಡಿಯಲ್ಲಿ ಧೂಪ ಹಾಕಿ ನಿಂಬೆ ಹಣ್ಣು ಕತ್ತರಿಸಿ ಪೂಜೆ ನೆರವೇರಿಸಿದ್ದ ಹೇಮಂತ್‌, ಇನ್ನು ಮುಂದೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದಿದ್ದ.

ಈ ನಡುವೆ, ಪೂಜೆ ನೋಡಿದ್ದ ಸಂತ್ರಸ್ತೆ ಸ್ನೇಹಿತೆಯರಿಬ್ಬರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಹೇಮಂತ್‌ ಬಳಿ ಕೇಳಿಕೊಂಡಿದ್ದರು. ಅದೇ ದಿನ ಅವರಿಬ್ಬರೂ ಹೇಮಂತ್‌ ಸೂಚನೆ ಮೇರೆಗೆ 1.30 ಲಕ್ಷ ರೂ. ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು.
ಹಲವು ತಿಂಗಳು ಉರುಳಿದರೂ ಸಮಸ್ಯೆಗಳಿಗೆ ಪರಿಹಾರ ಸಿಗದ ಸಂತ್ರಸ್ತೆ, ಮಹಿಳಾ ಕಾನ್ಸ್‌ಟೆಬಲ್‌, ಹೇಮಂತ್‌ಗೆ ದೂರವಾಣಿ ಮುಖಾಂತರ ಕರೆ ಮಾಡಿ ವಿಚಾರ ತಿಳಿಸಿದರೂ ಹಲವು ಸಬೂಬು ಹೇಳುತ್ತಿದ್ದ. ಕಡೆಗೆ ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ. ಅಂತಿಮವಾಗಿ ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆಯರು ಇತ್ತೀಚೆಗೆ ದೂರು ದಾಖಲಿಸಿದ್ದರು.

ಆರೋಪಿ ಹೇಮಂತ್‌ ಭಟ್‌ ಸಹಚರರಾದ ವಿಜಯ್‌ ಹಾಗೂ ಭಾಗೇಶ್‌ ಎಂಬುವರ ವಿರುದ್ಧವೂ ವಂಚನೆ ಕೇಸ್‌ ದಾಖಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

Gold Price ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ?

TAGGED:Astrologer arrested for defrauding female police officer by promising marriage luck
Share This Article
Facebook Twitter Copy Link Print
Previous Article Gold Price ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ?
Next Article Operation Sindoor is not over yet ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇದು ಟ್ರೇಲರ್ ಅಷ್ಟೆ: ರಾಜನಾಥ್ ಸಿಂಗ್

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?