Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > India- pak war ಭಾರತ- ಪಾಕ್‌ನಿಂದ ಪರಮಾಣು ಅಸ್ತ್ರ ಬಳಕೆ ಸಾಧ್ಯತೆ: ರೂಟ್ಲೆಡ್ಜ್‌ನಿಂದ ಬೆಚ್ಚಿಬೀಳಿಸುವ ವರದಿ
ದೇಶಪ್ರಮುಖವಿದೇಶ

India- pak war ಭಾರತ- ಪಾಕ್‌ನಿಂದ ಪರಮಾಣು ಅಸ್ತ್ರ ಬಳಕೆ ಸಾಧ್ಯತೆ: ರೂಟ್ಲೆಡ್ಜ್‌ನಿಂದ ಬೆಚ್ಚಿಬೀಳಿಸುವ ವರದಿ

Share
2 Min Read
SHARE

newsics.com

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬಹುತೇಕ ಪೂರ್ಣ ಪ್ರಮಾಣದ ಯುದ್ಧ ಹಾಗೂ ಪರಮಾಣು ಅಸ್ತ್ರ ಬಳಕೆ ಸಾಧ್ಯತೆಯನ್ನು ರೂಟ್ಲೆಡ್ಜ್ ಸಂಸ್ಥೆ 2019ರಲ್ಲೇ ವರದಿ‌ ಮಾಡಿದೆ.

ರೂಟ್ಲೆಡ್ಜ್ ಎನ್ನುವ ಬ್ರಿಟಿಷ್ ಪುಸ್ತಕ ಮುದ್ರಣ ಸಂಸ್ಥೆ 2019ರಲ್ಲಿ ಪ್ರಕಟಿಸಿದ ಒಂದು ಸಂಶೋಧನಾ ವರದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಸಾಧ್ಯತೆ ಬಗ್ಗೆ ಬರೆದಿದೆ. ಯುದ್ಧ ಹೇಗೆ ಶುರುವಾಗಬಹುದು, ಹೇಗೆ ವಿಕೋಪಕ್ಕೆ ತಿರುಗಬಹುದು ಎನ್ನುವ ಸಂಗತಿಯನ್ನು ಈ ಅಧ್ಯಯನದಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ.

2025ರಲ್ಲಿ ಭಾರತದೊಳಗೆ ದೊಡ್ಡ ಮಟ್ಟದ ಉಗ್ರ ದಾಳಿ ಸಂಭವಿಸುತ್ತದೆ. ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧಕ್ಕೆ ಕಿಡಿ ಹೊತ್ತಿಕೊಳ್ಳುತ್ತದೆ ಎಂದು 2019ರಲ್ಲೇ ಈ ಸಂಶೋಧನಾ ವರದಿ ಹೇಳಿತ್ತು.

ಪರಮಾಣು ಬಾಂಬ್ ದಾಳಿ ಸಾಧ್ಯತೆ:
ಉಗ್ರ ದಾಳಿ ಬಳಿಕ ಗಡಿ ಭಾಗದಲ್ಲಿ ಎರಡೂ ಕಡೆಯ ಸೈನಿಕ ತುಕಡಿಗಳ ನಿಯೋಜನೆಯಾಗುತ್ತದೆ.
ಪಾಕಿಸ್ತಾನದ ಪಡೆಗಳು ಪಾಕಿಸ್ತಾನ ಭೂಭಾಗದೊಳಗೆ ಪ್ರವೇಶ ಮಾಡುತ್ತವೆ. ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದೆದುರು ಸೋಲುವ ಭೀತಿ ಪಾಕಿಸ್ತಾನಕ್ಕೆ ಬರಬಹುದು. ಪರಿಣಾಮವಾಗಿ 10 ಪರಮಾಣು ಅಸ್ತ್ರಗಳನ್ನು ಭಾರತೀಯ ಟ್ಯಾಂಕ್‌ಗಳ ಮೇಲೆ ಬಳಸಬಹುದು. ಭಾರತವೂ
ಪಾಕಿಸ್ತಾನದ ಗಡಿಯಲ್ಲಿ ಅಣ್ವಸ್ತ್ರಗಳನ್ನು ಸಿಡಿಸಬಹುದು. ಒಂದೊಂದು ಅಸ್ತ್ರವೂ 5 ಕಿಲೋ ಟನ್‌ನಷ್ಟು ಪ್ರಬಲವಾಗಿರುತ್ತದೆ.

ಪಾಕಿಸ್ತಾನವು ಇನ್ನೂ 15 ಪರಮಾಣು ಬಾಂಬ್ ಹಾಕಬಹುದು.
ಇದಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಸೇನಾ ನೆಲೆ ಮತ್ತು ಪರಮಾಣು ಘಟಕಗಳನ್ನು ಗುರಿಯಾಗಿಸಿ 20 ಪರಮಾಣು ಬಾಂಬ್ ಹಾಕಬಹುದು.

1906ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಭೂಕಂಪ ವೇಳೆ ಸಂಭವಿಸಿದ ಅಗ್ನಿ ಅವಘಡ ಮತ್ತು ಹಿರೋಶಿಮಾದಲ್ಲಿ ಬಿದ್ದ ಬಾಂಬ್ ರೀತಿಯಲ್ಲಿ ಭಯಾನಕ ಅನುಭವವಾಗುತ್ತದಂತೆ. ಆದರೆ, ಇದು ಇಲ್ಲಿಗೇ ನಿಲ್ಲುವುದಿಲ್ಲ. ಭಾರತವು ಸಂಘರ್ಷ ಮುಂದುವರಿಸುತ್ತದೆ ಎಂದು 2019ರ ರೂಟ್ಲೆಡ್ಜ್ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ನಿಯಂತ್ರಣ ತಪ್ಪಲಿದ್ಯಾ?
ಅಣ್ವಸ್ತ್ರ ಬಳಕೆಯ ಮೂರನೇ ದಿನ ಪಾಕಿಸ್ತಾನವು ಭಾರತದ ನೌಕಾ ನೆಲೆ ಮತ್ತು ನಗರ ವಾಯುನೆಲೆಗಳ ಮೇಲೆ 45 ಅಣ್ವಸ್ತ್ರ ಬಾಂಬ್ ಹಾಕಬಹುದು.
ಇದಕ್ಕೆ ಪ್ರತಿಯಾಗಿ ಭಾರತವೂ 10 ಬಾಂಬ್ ಹಾಕುತ್ತದೆ. ಮುಂದಿನ ಮೂರು ದಿನದಲ್ಲಿ ಪಾಕಿಸ್ತಾನವು ಭಾರತೀಯ ನಗರಗಳನ್ನು ಗುರಿಯಾಗಿಸಿ ತನ್ನೆಲ್ಲಾ 120 ಅಣ್ವಸ್ತ್ರಗಳನ್ನು ಹಾರಿಸಬಹುದು.
ಭಾರತವು 70 ಅಣ್ವಸ್ತ್ರ ಪ್ರಯೋಗಿಸಬಹುದು. ತನ್ನಲ್ಲಿ ಉಳಿದಿರುವ 100 ಅಸ್ತ್ರಗಳನ್ನು ಚೀನಾಗೆಂದು ಮೀಸಲಿರಿಸಿಕೊಂಡಿರುತ್ತದೆ ಎಂದು ವರದಿ ಹೇಳಿದೆ.

5ರಿಂದ 12 ಕೋಟಿ‌ ಜನ ಸಾವು:

ರೂಟ್ಲೆಡ್ಜ್ ವರದಿಯ ಪ್ರಕಾರ, ಅಣ್ವಸ್ತ್ರಗಳು ಬಳಕೆಯಾದರೆ 5ರಿಂದ 12 ಕೋಟಿ ಜನರು ಕೂಡಲೇ ಸಾಯಬಹುದು. ಎರಡೂ ದೇಶಗಳ ಪ್ರಮುಖ ನಗರಗಳೆಲ್ಲವೂ ಸಂಪೂರ್ಣ ನಿರ್ನಾಮವಾಗಬಹುದು.

ಇದರ ಪರಿಣಾಮ ಭಾರತ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಜಗತ್ತಿನಾದ್ಯಂತ ಪರಿಸರಕ್ಕೆ ಹಾನಿಯಾಗುತ್ತದೆ. ಹಲವೆಡೆ ಬರ ಪರಿಸ್ಥಿತಿ ಉದ್ಭವಿಸಬಹುದು. ನೂರಾರು ಕೋಟಿ ಜನರಿಗೆ ಸಾವು ಬದುಕಿನ ಪ್ರಶ್ನೆ ಉದ್ಭವಿಸಬಹುದು ಎಂದು ಈ ರಿಸರ್ಚ್ ಸ್ಟಡಿಯಲ್ಲಿ ಅಂದಾಜಿಸಲಾಗಿದೆ.

India vs Pakistan War ಪಾಕ್‌ನಿಂದ ಕುತಂತ್ರಿ ಬುದ್ಧಿ ಮುಂದುವರಿಕೆ: 26 ಸ್ಥಳ ಗುರಿಯಾಗಿಸಿಕೊಂಡು ಪಾಕ್ ದಾಳಿ

TAGGED:India-Pakistan likely to use nuclear weapons: Shocking report from Routledge
Share This Article
Facebook Twitter Copy Link Print
Previous Article ಪಾಕಿಸ್ತಾನದ ಶೆಲ್‌ ದಾಳಿಯಲ್ಲಿ ಐಎಎಸ್ ಅಧಿಕಾರಿ ಸಾವು, ಸಿಬ್ಬಂದಿಗೆ ಗಾಯ – ಕಂಬನಿ ಮಿಡಿದ ಒಮರ್‌ ಅಬ್ದುಲ್ಲಾ
Next Article ಭಾರತ-ಪಾಕ್ ಉದ್ವಿಗ್ನತೆ ನಡುವೆ ಅಲ್ಲು ಕುಟಂಬದ ಮಾದರಿ ನಡೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?