newsics.com
ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ತಡರಾತ್ರಿ ಭಾರತ ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದೀಗ ಭಾರತ ಸಮರಾಭ್ಯಾಸ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇದೀಗ ಬ್ಲಾಕ್ ಔಟ್ ಅಣುಕು ಪ್ರದರ್ಶನ ನಡೆಸಿದೆ.
ಹೌದು ಪಾಕಿಸ್ತಾನ ವಿರುದ್ಧ ಭಾರತ ಸಮರಾಭ್ಯಾಸ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಬ್ಲಾಕ್ ಔಟ್ ಅಣುಕು ಪ್ರದರ್ಶನ ನಡೆಸಿದೆ. ಬ್ಲ್ಯಾಕ್ ಔಟ್ ಮಾಡಿ ಎಲ್ಲಾ ಕಡೆಗೂ ಏಕ ಕಾಲದಲ್ಲಿ ವಿದ್ಯುತ್ ಸ್ಥಗಿತಗೊಳಿಸಿ ಬ್ಲ್ಯಾಕ್ ಔಟ್ ಅಣುಕು ಪ್ರದರ್ಶನ ಮಾಡಲಾಯಿತು.
ಬೆಂಗಳೂರಿನ ವಿವಿದೆಡೆಗಳಲ್ಲೂ ಸಹ ಮಾಕ್ ಡ್ರಿಲ್ ಮಾಡಲಾಗಿದೆ. ಮೊದಲು ಎರಡು ನಿಮಿಷಗಳ ಸೈರನ್ ಮೊಳಗಿದ್ದು, ಬಳಿಕ ಜನರು ಹೇಗೆಲ್ಲಾ ಮಾಡಬೇಕೆಂದು ಅಣಕು ಪ್ರದರ್ಶನ ಮೂಲಕ ತೋರಿಸಲಾಯ್ತು. ಇನ್ನು ಕೇಂದ್ರ ಸೂಚನೆಯಂತೆ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ಮಾಡಲಾಯ್ತು.ದೆಹಲಿ, ಬಿಹಾರ್ ಹಾಗು ಉತ್ತರಪ್ರದೇಶದಲ್ಲೂ ಬ್ಲಾಕ್ ಔಟ್ ಅಣುಕು ಪ್ರದರ್ಶನ ಮಾಡಲಾಗಿದ್ದು, ಬೆಂಗಳೂರಿನ ಹಲಸೂರಿನ ಮಾತ್ರ ಬ್ಲಾಕ್ ಔಟ್ ಮಾಡಲಾಗಿದೆ.