newsics.com
ಪೆಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಭಾರತ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದೊಳಗೆ ನುಗ್ಗಿ 9 ಕಡೆಗಳಲ್ಲಿ ಭಾರತೀಯ ಸೇನೆ ಏರ್ಸ್ಟ್ರೈಕ್ ಮಾಡಿದ್ದು, ಉಗ್ರರ ನೆಲೆಗಳನ್ನು ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದ್ದು, ಇದೀಗ ಭಾರತ-ಪಾಕ್ ಯುದ್ಧದ ಕಾರ್ಮೋಡ ಆವರಿಸಿದೆ.
ಇದೆಲ್ಲದರ ನಡುವೆ ಆರ್‌ಸಿಬಿ ಅಭಿಮಾನಿಯೊಬ್ಬ, ಒಂದು ವೇಳೆ ಪಾಕಿಸ್ತಾನ ಮೇಲೆ ಪೂರ್ಣ ಪ್ರಮಾಣದ ಯುದ್ದ ನಡೆಯಬೇಕು ಎಂದಾದರೇ ದಯವಿಟ್ಟು ಮೇ 25ರ ನಂತ್ರ ನಡೆಸಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಶ್ ಬದ್ಲಾನಿ ಎನ್ನುವ ನೆಟ್ಟಿಗನೊಬ್ಬ, ‘ಮೋದಿ ಸೇರಿದಂತೆ ಇಡೀ ಸರ್ಕಾರಕ್ಕೆ ನನ್ನದೊಂದು ಮನವಿಯಿದೆ. ನೀವು ನಿಜವಾಗಿ ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಯುದ್ದ ಮಾಡಬೇಕು ಅಂತಿದ್ದರೆ ಮೇ 25ರ ನಂತರ ಮಾಡಿ. ಸಾಕಷ್ಟು ಸಮಯದ ಬಳಿಕ ಬಳಿಕ ಆರ್‌ಸಿಬಿ ಕಪ್ ಗೆಲ್ಲುವ ಭರವಸೆ ಕಾಣುತ್ತಿದೆ. ಆರ್‌ಸಿಬಿ ತಂಡದ ಈಗಿನ ಪ್ರದರ್ಶನ ನೋಡುತ್ತಿದ್ದರೇ ಫೈನಲ್‌ಗೇರಿ, ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ. ಹೀಗಾಗಿ ಮೇ 25ರ ವರೆಗೆ ಕಾಯಿರಿ, ಆಮೇಲೆ ಏನು ಬೇಕಿದ್ದರೂ ಮಾಡಿ ಎಂದು ನೆಟ್ಟಿಗನೊಬ್ಬ ಕೈಮುಗಿದು ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವೀಗ ವೈರಲ್ ಆಗುತ್ತಿದೆ
https://www.instagram.com/reel/DJUuXq_sRCS/?igsh=MXY3c2NhbDk2Z3N0Zw==