newsics.com
ಬೆಂಗಳೂರು : ಇದೀಗ ಸಿಹಿತಿನಿಸುಗಳಾದ ಚಾಕೋಲೇಟ್, ಪೆಪ್ಪರ್ ಮೆಂಟ್, ಜೇಮ್ಸ್ ಜೆಲ್ಲಿಗಳಲ್ಲಿ ಕೃತಕ ಬಣ್ಣ, ಕಲಬರಕೆ ನಡೆಯುತ್ತಿದೆ ಎಂದು ಆರೋಪಗಳ ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಗುಣಮಟ್ಟ ಇಲಾಖೆಯು ಪರೀಕ್ಷೆಗೆ ಮುಂದಾಗಿದೆ.
ಮಕ್ಕಳ ಅಚ್ಚುಮೆಚ್ಚಿನ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ಗಳಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವುದಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಎಫ್ಎಸ್ಎಸ್ಎಐ ಸೂಚನೆ ಬೆನ್ನಲೆ ರಾಜ್ಯದಲ್ಲಿ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಸ್ಯಾಂಪಲ್ಸ್ ಪಡೆದು ಆಹಾರ ಇಲಾಖೆಯ ಲ್ಯಾಬ್ಗಳಲ್ಲಿ ಟೆಸ್ಟ್ಗೆ ಒಳಪಡಿಸಲು ಮುಂದಾಗಿದೆ
ಇನ್ನೂ ಕಲಬರಕೆ ಸಂಬಂಧ ಜಿಲೇಬಿ, ಶರಬತ್ ಮಾದರಿ ಸಂಗ್ರಹಕ್ಕೆ ಆಹಾರ ಇಲಾಖೆ ಮುಂದಾಗಿದ್ದು, ಪ್ರತಿ ಜಿಲೆಯಲ್ಲೂ ತಲಾ 5 ಮಾದರಿ ಸಂಗ್ರಹಿಸುವಂತೆ ಸೂಚನೆ ನೀಡಿದೆ.