newsics.com
ದಾವಣಗೆರೆ : ಬ್ಯಾಂಕ್ನ ಲಾಕರ್ನಲ್ಲಿ ಇಟ್ಟ ಅಲ್ಲ 3 ಕೆಜಿ ಚಿನ್ನ ಕದ್ದು, ಬಳಿಕ ಲಾಕರ್ನಲ್ಲಿ ನಕಲಿ ಗೋಲ್ಡ್ ಇಟ್ಟು ಸಿಬ್ಬಂದಿ ಪರಾರಿಯಾಗಿರುವ ಘಟನೆ ದಾವಣಗೆರೆ ನಗರದಲ್ಲಿ ಲಾಯರ್ ರೋಡ್ ನಲ್ಲಿ ಇರುವ CSB ಬ್ಯಾಂಕ್ ನಲ್ಲಿ ನಡೆದಿದೆ. ಬ್ಯಾಂಕ್ ಸಿಬ್ಬಂದಿ ಸಂಜಯ್ ಎಂಬಾತ ಬ್ಯಾಂಕ್ನಲ್ಲಿಟ್ಟಿದ್ದ ಜನರ ಚಿನ್ನವನ್ನೇ ಕದ್ದು ಎಸ್ಕೇಪ್ ಆಗಿದ್ದ.
ಸಂಜಯ್ ಎಂಬಾತ CSB ಬ್ಯಾಂಕ್ ನಲ್ಲಿ ಅಡವಿಟ್ಟ ಚಿನ್ನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಬ್ಯಾಂಕ್ ನಲ್ಲಿ ಅಡಮಾನ ಇಟ್ಟ 3 ಕೆಜಿ ಚಿನ್ನವನ್ನು ಕದ್ದೊಯ್ಯುವ ಮೂಲಕ ಅವರು ವಂಚನೆ ಬ್ಯಾಂಕ್ನವರಿಗೆ ವಂಚಿಸಲು ಮುಂದಾಗಿದ್ದಾನೆ. ಅಸಲಿ ಚಿನ್ನವನ್ನು ಕದ್ದೊಯ್ದು, ನಕಲಿ ಚಿನ್ನವನ್ನು ಇಟ್ಟಿದ್ದಾನೆ.
ಬ್ಯಾಂಕ್ ನ ಮುಖ್ಯ ಸಿಬ್ಬಂದಿ ಲೆಕ್ಕ ಪರಿಶೀಲನೆಗಾಗಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಲೆಕ್ಕ ಪರಿಶೀಲನೆ ವೇಳೆ, ಲಾಕರ್ ಕೀ ನೀಡದೆ ನಾನಾ ಕಾರಣ ಹೇಳಿದ್ದ. ಬಳಿಕ ಬ್ಯಾಂಕ್ ಬಿಟ್ಟು ಸಂಜಯ್ ಎಸ್ಕೇಪ್ ಆಗಿದ್ದ ಎನ್ನಲಾಗ್ತದೆ. CSB ಬ್ಯಾಂಕ್ ನ 1.86 ಕೋಟಿ ಮೌಲ್ಯದ ಚಿನ್ನವನ್ನು ಕದ್ದು ಸಂಜಯ್ ಪರಾರಿಯಾಗಿದ್ದ.
ನಂತರ ಬ್ಯಾಂಕ್ ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಬ್ಯಾಂಕ್ಗೆ ವಂಚನೆ ಮಾಡಿದ ಚಿನ್ನ ಕದ್ದಿರುವ ಬಗ್ಗೆ ತಿಳಿದು.ಈ ಬಗ್ಗೆ ದಾವಣಗೆರೆ KTJ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜಯ್ ನನ್ನು ಬಂಧಿಸುದ್ದಾರೆ.