newsics.com
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹ*ತ್ಯೆ ಪ್ರಕರಣಕ್ಕೆ ಸಂಬಂದಿಸಿ 8 ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.
ಇದೀಗ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಮುಖ್ಯ ಪೇದೆ ರಶೀದ್ ಭಾಗಿಯಾಗಿದ್ದಾನೆ ಎಂದು ಹಿಂದೂ ಜಾಗಾರಣ ವೇದಿಕೆ ಪ್ರಾಂತ ಪ್ರಮುಖ ಕೆಟಿ ಉಲ್ಲಾಸ್ ಆರೋಪ ಮಾಡಿದ್ದಾರೆ.
ಕೊಲೆಯಲ್ಲಿ ನಿಷೇಧಿತ ಸಂಘಟನೆ ಪಿಎಫ್ಐ ಕೈವಾಡ ಬಲವಾಗಿದ್ದು, ದೊಡ್ಡ ಮಟ್ಟದ ಫಂಡಿಂಗ್ ಮಾಡಿರುವ ಶಂಕೆ ಇದೆ. ಕೊಲೆಯಾಗುವುದಕ್ಕೂ ಮೂರು ದಿನ ಮೊದಲು ಸುಹಾಸ್ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಬಜ್ಪೆ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ರಶೀದ್ ಮೂಲಕವೇ ಆರೋಪಿಗಳಿಗೆ ಈ ಮಾಹಿತಿ ತಲುಪಿತ್ತೆಂಬ ಶಂಕೆ ಇದೆ. ಹೀಗಾಗಿ ಕೊಲೆ ಪ್ರಕರಣದ ಒಟ್ಟು ತನಿಖೆಯನ್ನು ಎನ್ಐಎ ಅಧಿಕಾರಿಗಳಿಂದಲೇ ನಡೆಸಬೇಕು. ಆಗಮಾತ್ರ ಇದರ ಹಿಂದಿನ ಶಕ್ತಿ, ಷಡ್ಯಂತ್ರ ಬಯಲಿಗೆ ಬರುತ್ತದೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಮುಖರಾದ ಕೆ.ಟಿ. ಉಲ್ಲಾಸ್ ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಬಳಿ ಇದ್ದ ಆಯಧಗಳನ್ನು ಎಸಿಪಿ ದರ್ಜೆ ಪೊಲೀಸ್ ಅಧಿಕಾರಿ ತೆಗೆಸಿದ್ದಾರೆ. ಸುಹಾಸ್ ಶೆಟ್ಟಿ ಬಳಿ ಯಾವುದೇ ಆಯುಧ ಇಲ್ಲ, ನಿರಾಯುಧನಾಗಿ ಬಜ್ಪೆ ಮಾರ್ಗವಾಗಿ ಸಾಗುತ್ತಿದ್ದಾನೆ ಅನ್ನೋ ಮಾಹಿತಿ ಪೊಲೀಸ್ ಮುಖ್ಯ ಪೇದೆ ರಶೀದ್ ಮೂಲಕವೇ ಆರೋಪಿಗಳಿಗೆ ಗೊತ್ತಾಗಿದೆ. ಹೀಗಾಗಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಈ ದಾಳಿ ಮಾಡಿದ್ದಾರೆ ಎಂದು ಉಲ್ಲಾಸ್ ಆರೋಪಿಸಿದ್ದಾರೆ.