newsics.com
ಡ್ರೀಮ್ 11 ನಲ್ಲಿ ಕೇವಲ 39 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 4 ಕೋಟಿ ರೂ. ಪಡೆದುಕೊಂಡಿದ್ದಾನೆ. ಅದೃಷ್ಟ ಹೇಗೆ ಖುಲಾಯಿಸುತ್ತೆ ಎಂದು ಗೊತ್ತಿರಲ್ಲ. ಅದೃಷ್ಟವು ಕೈ ಹಿಡಿದರೆ ರಾತ್ರಿ ಬೆಳೆಗಾಗುವುದರೊಳಗೆ ಎಲ್ಲವೂ ಬದಲಾಗಿಬಿಡಬಹುದು. ಹಾಗೆಯೇ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆ ಯ ಯುವಕ ಮಂಗಳ್ ಸರೋಜ್ ಅದೃಷ್ಟ ಕೈ ಹಿಡಿದೆ.
ಮಂಗಳ್ ಸರೋಜ್ ಮಾರ್ಚ್ ತಿಂಗಳಿನಿಂದ Dream11 ನಲ್ಲಿ ಆಟ ಆಡಲು ಪ್ರಾರಂಭಿಸಿದ್ದರು. ಈವರೆಗೆ 77 ಬಾರಿ ತಂಡ ರಚಿಸಿದ್ದರೂ ಪ್ರತಿ ಬಾರಿಯೂ ವಿಫಲರಾಗಿದ್ದರು. ಏಪ್ರಿಲ್ 29 ರಂದು ಚೆನ್ನೈ ಮತ್ತು ಪಂಜಾಬ್ ನಡುವಿನ IPL ಪಂದ್ಯದಲ್ಲಿ ₹39 ಖರ್ಚು ಮಾಡಿ ತಂಡ ರಚಿಸಿದ್ದರು. ಮರುದಿನ ಬೆಳಿಗ್ಗೆ ಫಲಿತಾಂಶ ನೋಡಿದಾಗ Dream11 ನ ₹4 ಕೋಟಿ ಬಹುಮಾನ ಗೆದ್ದಿದ್ದರು. ರಾತ್ರಿ ಬೆಳಗಾಗುವುದರೊಳಗಾಗಿ ಇಡೀ ಗ್ರಾಮವೇ ಈ ಯುವಕನ ಸಾಧನೆಗೆ ಮೆಚ್ಚಿಕೊಳ್ಳವಂತಾಗಿದೆ.ಮಂಗಳ್ ಸರೋಜ್ ಈ ಬಗ್ಗೆ ಮಾತನಾಡಿರುವ ವಿಡಿಯೋವನ್ನು Ghar Ke Kalesh ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಗಿದೆ.
ಈ ವಿಡಿಯೋದಲ್ಲಿ Dream11 ನಲ್ಲಿ ಗೆದ್ದ ಬಹುಮಾನದ ಬಗ್ಗೆ ಮಂಗಳ್ ಸರೋಜ್. ಈ ಹಣವನ್ನು ಉತ್ತಮ ಮತ್ತು ಸ್ಥಿರ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಹಲವು ಬಾರಿ ಸೋತರೂ ಭರವಸೆ ಕಳೆದುಕೊಳ್ಳಲಿಲ್ಲ ಎಂದಿದ್ದಾರೆ.ನಿ ಎಂದು ಹೇಳಿರುವುದನ್ನು ನೋಡಬಹುದು.