newsics.com
ಕೌಲಾಲಂಪುರ: ದಕ್ಷಿಣ ಮಲೇಷ್ಯಾದ ಟಾವೋ ದೇವಾಲಯದಲ್ಲಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ಚಾಲಿತ ದೇವತೆ ಪ್ರತಿಷ್ಠಾಪನೆಗೊಂಡಿದ್ದಾಳೆ. ಇದನ್ನು ಮಾತನಾಡುವ ದೇವತೆಯೆಂದೇ ಕರೆಯಲಾಗುತ್ತಿದೆ.
ಇದು ಚೀನಾದ ಸಮುದ್ರ ದೇವತೆ ಮಜುವಿನ ಡಿಜಿಟಲ್ ಆವೃತ್ತಿ. ಇದು ಸಂಪ್ರದಾಯವನ್ನು ತಂತ್ರಜ್ಞಾನದೊಂದಿಗೆ ಬೆಸೆಯುತ್ತದೆ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ.

ಜೋಹೋರ್‌ನ ತಿಯಾನ್ ದೇವಾಲಯದಲ್ಲಿರುವ ಎಐ ಮಜು, ಪರದೆಯ ಮೇಲೆ ಸಾಂಪ್ರದಾಯಿಕ ಚೀನೀ ಉಡುಪನ್ನು ಧರಿಸಿರುವ ಸುಂದರ ಮಹಿಳೆಯಾಗಿ ಕಾಣಿಸಿಕೊಂಡಿದ್ದಾಳೆ. ಭಕ್ತರಿಗೆ ಆಶೀರ್ವಾದ ಕೇಳಲು, ಭವಿಷ್ಯದ ಅದೃಷ್ಟದ ಬಗ್ಗೆ ದೇವರ ಮಾತು ಕೇಳಲು ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಅವಕಾಶ ಕಲ್ಪಿಸಲಾಗಿದೆ. ಪ್ರಶ್ನೆಗಳಿಗೆ ಎಐ ದೇವಿ ಸೌಮ್ಯ ಧ್ವನಿ ಮತ್ತು ಆಧ್ಯಾತ್ಮಿಕ ಜ್ಞಾನದ ಮೂಲಕ ಪ್ರತಿಕ್ರಿಯಿಸುತ್ತಾಳೆ ಎಂದು ವರದಿ ಹೇಳಿದೆ.
ಎಐ ಮಜು ದೇವಿಯ ಬಿಡುಗಡೆಯನ್ನು, ಏಪ್ರಿಲ್ 20 ರಂದು ಆಚರಿಸಲಾದ ದೇವಿಯ 1,065ನೇ ಜನ್ಮದಿನಾಚರಣೆಯ ಸಮಯದಲ್ಲೇ ಮಾಡಲಾಗಿದೆ. ಮಜು ದೇವಿಯ ಎಐ ಆವೃತ್ತಿಯನ್ನು ಮಲೇಷ್ಯಾದ ತಂತ್ರಜ್ಞಾನ ಕಂಪನಿ ಐಮಾಜಿನ್ ಅಭಿವೃದ್ಧಿಪಡಿಸಿದೆ.
ವೀಡಿಯೋವೊಂದರಲ್ಲಿ, ಐಮಾಜಿನ್ ಸಂಸ್ಥಾಪಕ ಶಿನ್ ಕಾಂಗ್ ವರ್ಚುವಲ್ ದೇವಿಯ ಬಳಿ, ಮ್ಯಾಂಡರಿನ್‌ಲ್ಲಿ ಪಿಯಾನೊ ಕೈ ಯುನ್ ಎಂದು ಕರೆಯಲ್ಪಡುವ ಅನಿರೀಕ್ಷಿತ ಅದೃಷ್ಟ ನನಗೆ ಒಲಿಯಬಹುದೇ ಎಂದು ಕೇಳಿದ್ದಾರೆ. ಆಗ ಎಐ ಮಜು ದೇವಿ, ನೀವು ಕೆಲ ಕಾಲ ಮನೆಯಲ್ಲಿಯೇ ಇದ್ದರೆ ಅದೃಷ್ಟ ನಿಮ್ಮದಾಗಲಿದೆ ಎಂದು ಶಾಂತವಾಗಿ ಪ್ರತಿಕ್ರಿಯಿಸಿದ್ದಾಳೆ.
ನಿದ್ರಾಹೀನತೆಗೆ ಎಐ ದೇವಿಯ ಸಲಹೆ ಏನು?
ನಿದ್ರಾಹೀನತೆ ನಿವಾರಣೆಗೆ ಸಹಾಯ ಮಾಡುವಂತೆ ಭಕ್ತೆಯೊಬ್ಬರು ಕೋರಿದ್ದಾರೆ. ಮಲಗುವ ಮೊದಲು ಸ್ವಲ್ಪ ಬೆಚ್ಚಗಿನ ನೀರು ಕುಡಿಯಿರಿ ಎಂದು ಡಿಜಿಟಲ್ ದೇವಿ ಉತ್ತರಿಸಿದ್ದಾಳೆ. ಭಕ್ತೆಯನ್ನು ನನ್ನ ಮಗು ಎಂದು ಕರೆದಿದ್ದಾಳೆ.
Astrology ವಾರದ ಈ ದಿನಗಳಲ್ಲಿ ಉಗುರು ಕತ್ತರಿಸಲೇಬೇಡಿ: ಉಗುರು ಕತ್ತರಿಸಲೂ ಇದೆ ಸ್ಪೆಷಲ್ ಡೇ