newsics.com
ಸಣ್ಣ ವಯಸ್ಸಲ್ಲೇ ಈಕೆ ಸಿಎ ಪಾಸ್ ಮಾಡಿ- ಆಲ್ ಇಂಡಿಯಾ 1ನೇ ರ್ಯಾಂಕ್ ಪಡರದು ಸಾಧನೆ ಮೆರೆದಿದ್ದಾಳೆ.
ಮಧ್ಯಪ್ರದೇಶದ ಮೊರೆನಾದ 19 ವರ್ಷದ ನಂದಿನಿ ಅಗರವಾಲ್ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿ ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾಳೆ.
ಮೊದಲಿನಿಂದಲೂ ಓದಿನಲ್ಲಿ ಚೂಟಿ ಇದ್ದ ನಂದಿನಿ, ಕೆಲ ಸಮಸ್ಯೆಯಿಂದಾಗಿ ಮಧ್ಯದಲ್ಲಿ ಓದಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವಳು 13ನೇ ವಯಸ್ಸಿನಲ್ಲಿ 10ನೇ ತರಗತಿ ಮತ್ತು 15ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಪಡೆದಳು. ನಂತರ ಬಿ.ಕಾಮ್ ಆಧಾರದ ಮೇಲೆ ಚಾರ್ಟರ್ಡ್ ಅಕೌಂಟೆಂಟ್ ಅಭ್ಯಾಸ ಮಾಡಿ 19ನೇ ವಯಸ್ಸಿನಲ್ಲಿ CA ಫೈನಲ್‌ನಲ್ಲಿ AIR 1 ಮತ್ತು 16ನೇ ವಯಸ್ಸಿನಲ್ಲಿ CA ಇಂಟರ್‌ನಲ್ಲಿ AIR 31 ಪಡೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮಾಡಿದ್ದಾರೆ ನಂದಿನಿ ಅಗರವಾಲ್.
ಕೇವಲ 19 ವರ್ಷ ವಯಸ್ಸಿನಲ್ಲಿ, ನಂದಿನಿ ಅಗರವಾಲ್ 2021ರಲ್ಲಿ CA ಫೈನಲ್ ಪರೀಕ್ಷೆಯಲ್ಲಿ ಅಖಿಲ ಭಾರತ ರ್ಯಾಂಕ್ (AIR) 1 ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. 800 ರಲ್ಲಿ 614 ಅಂಕಗಳನ್ನು ಗಳಿಸಿ 76.75% ಪಡೆದ ಇವರು ಹೊಸ ಸಾಧನೆಗೆ ಮುನ್ನುಡಿ ಬರೆದರು.
ಈ ರಿಸಲ್ಟ್ ಹೊರಬಿದ್ದಾಗ ಅವರಿಗೆ ಸರಿಯಾಗಿ 19 ವರ್ಷ ಮತ್ತು 330 ದಿನಗಳಾಗಿತ್ತು. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಗಳಿಂದ ಗುರುತಿಸಲ್ಪಟ್ಟ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಎಂಬ ಪ್ರತಿಷ್ಠಿತ ಸ್ಥಾನಮಾನವನ್ನು ಈಕೆ ಗಳಿಸಿದಳು.
CM Siddaramaiah ಪೊಲೀಸ್ ಅಧಿಕಾರಿಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಲು ಮುಂದಾಗಿದ್ದ ಸಿಎಂ ಸಿದ್ದರಾಮಯ್ಯ