newsics.com
ಜಮ್ಮು ಮತ್ತು ಕಾಶ್ಮೀರದಲ್ಲಿ ನಿತ್ಯ ಪೊಲೀಸರ ಹದ್ದಿನಕಣ್ಣು ಇದ್ದೇ ಇರುತ್ತದೆ. ಇಲ್ಲಿನ ಗಲ್ಲಿ ಗಲ್ಲಿಯಲ್ಲೂ ಪೊಲೀಸರು ಗನ್ ಹಿಡಿದು ಕಾಯುತ್ತಿರುತ್ತಾರೆ. ಇಷ್ಟು ಭದ್ರತೆ ಇದ್ದರೂ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಮಧ್ಯಾಹ್ನ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು. ದಾಳಿಯಲ್ಲಿ ಶಿವಮೊಗ್ಗ ಮೂಲದ ಉದ್ಯಮಿ ಸಾವನ್ನಪ್ಪಿದ್ದು, ಸೇರಿ ಒಟ್ಟು 27 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. 20 ಮಂದಿ ಪ್ರವಾಸಿಗರು ಗಾಯಗೊಂಡಿದ್ದಾರೆ.
ಇದೀಗ ಕೇವಲ ಭಾರತೀಯರು ಮಾತ್ರವಲ್ಲ ವಿದೇಶಿಯರು ಕೂಡಾ ಭಯೋತ್ಪಾದಕರ ದಾಳಿಯಲ್ಲಿ ವಿದೇಶಿಗರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ಇಸ್ರೇಲಿ ಮತ್ತು ಒಬ್ಬ ಇಟಾಲಿಯನ್ ಪ್ರವಾಸಿಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ದುರಂತದ ಬಗ್ಗೆ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಇಟಲಿ, ಇಸ್ರೇಲ್ ವಿದೇಶಿಗರು ಮೃತಪಟ್ಟಿದ್ದು ಕೇಳಿ ಆ ದೇಶದ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನೋಡಬೇಕಿದೆ. ಇದೀಗ ಈ ಕೃತ್ಯದ ಹಿಂದಿನ ಭಯೋತ್ಪಾದಕರು ಸುಳಿವು ಸಿಕ್ಕರೆ ಏನು ಮಾಡಬಹುದು ಎಂಬ ಪ್ರಶ್ನೆ ಎದುರಾಗಿದೆ.