newsics.com
ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ತಮ್ಮ ಕಾಸಾ ಸಾಂತಾ ಮಾರ್ಟಾದ ತಮ್ಮ ನಿವಾಸದಲ್ಲಿ ಸೋಮವಾರ ಕೊನೆಯುಸಿರೆಳೆದರು.
ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಹಲವು ಕಾಲದಿಂದ ವಯೋಸಹಜ ಅಸ್ವಸ್ಥತೆಯಿಂದ ಅವರು ಬಳಲಿದ್ದರು. ಇತ್ತೀಚೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ವ್ಯಾಟಿಕನ್ ವಿಡಿಯೋ ಪೋಪ್ ಫ್ರಾನ್ಸಿಸ್ ಸಾವನ್ನು ಖಚಿತಪಡಿಸಿದೆ.
ವ್ಯಾಟಿಕನ್ ನ್ಯೂಸ್ ಪ್ರಕಾರ, ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ಈಸ್ಟರ್ ಸಂಭ್ರಮದ ಸಂದರ್ಭದಲ್ಲಿ, ದೀರ್ಘ ಸಮಯದ ಬಳಿಕ ಜನರ ಮುಂದೆ ಕಾಣಿಸಿಕೊಂಡಿದ್ದರು.
‘ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಫಾದರ್ ಫ್ರಾನ್ಸಿಸ್ ಅವರು ನಿಧನರಾಗಿರುವುದನ್ನು ನಾನು ಅತೀವ ದುಃಖದಿಂದ ಘೋಷಿಸುತ್ತಿದ್ದೇನೆ’ ಎಂದು ಕಾರ್ಡಿನಲ್ ಕೆವಿನ್ ಫಾರೆಲ್, ವ್ಯಾಟಿಕನ್ ಟಿವಿ ಚಾನೆಲ್ನಲ್ಲಿ ಘೋಷಿಸಿದ್ದಾರೆ.
ಸೋಮವಾರ ಬೆಳಗ್ಗೆ 7.35ಕ್ಕೆ ರೋಮ್ನ ಬಿಷಪ್ ಫ್ರಾನ್ಸಿಸ್ ಅವರು ನಿಧನರಾದರು. ಅವರ ಇಡೀ ಜೀವನವು ಭಗವಂತನ ಸೇವೆ ಮತ್ತು ಚರ್ಚ್ಗೆ ಸಮರ್ಪಿತವಾಗಿತ್ತು ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾರ್ಜ್ ಮಾರಿಯೊ ಬರ್ಗೊಗ್ಲಿಯೊ(ಪೋಪ್ ಫ್ರಾನ್ಸಿಸ್) 2013ರ ಮಾರ್ಚ್ 13ರಂದು ಪೋಪ್ ಆಗಿ ಆಯ್ಕೆಯಾಗಿದ್ದರು.
Supreme court ಬಿಎಸ್ವೈ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್