newsics.com
ವೆಸ್ಟ್ರನ್ ಟಾಯ್ಲೆಟ್ ಬಳಸುವ ಎಷ್ಟೋ ಮಂದಿಗೆ ಎರಡು ಫ್ಲಶ್ ಬಟನ್ ಏಕೆ ನೀಡಲಾಗಿರುತ್ತದೆ ಎಂಬ ಪ್ರಶ್ನೆ ಕಾಡಿರಬಹುದು.
ಕೆಲವೊಮ್ಮೆ ಯಾವುದೇ ಬಟನ್ ಒತ್ತಿದರೂ ನೀರು ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಕೆಲವರು ಯಾವಾಗಲೂ ದೊಡ್ಡ ಬಟನ್ ಒತ್ತಿದರೆ, ಮತ್ತೆ ಕೆಲವರು ಚಿಕ್ಕ ಬಟನ್ ಒತ್ತುತ್ತಾರೆ. ಹಾಗಾದರೆ ಇವೆರಡರ ನಡುವೆ ಇರುವ ವ್ಯತ್ಯಾಸವೇನು?
ಸಣ್ಣ ಬಟನ್ ಒತ್ತಿದರೆ ಅದರಿಂದ ಕಡಿಮೆ ನೀರು ಬರುತ್ತದೆ. ದೊಡ್ಡ ಬಟನ್ ಒತ್ತಿದರೆ ಜಾಸ್ತಿ ನೀರು ಬರುತ್ತದೆ.
ನೀರನ್ನು ಉಳಿಸಲು ಡ್ಯುಯಲ್ ಫ್ಲಶ್ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಈ ಹಿಂದೆ ಶೌಚಾಲಯದಲ್ಲಿ ಒಂದೇ ಫ್ಲಶ್ ಮೂಲಕ ಅಗತ್ಯಕ್ಕಿಂತ ಹೆಚ್ಚು ನೀರು ಹರಿಯುತ್ತಿತ್ತು. ಈಗ ಡ್ಯುಯಲ್ ಫ್ಲಶ್ ಬಳಸುವುದರಿಂದ ಒಂದು ವರ್ಷದಲ್ಲಿ ಸಾವಿರಾರು ಲೀಟರ್ ನೀರು ಉಳಿತಾಯವಾಗುತ್ತದೆ. ವಾಸ್ತವವಾಗಿ, ಆಧುನಿಕ ಶೌಚಾಲಯಗಳಲ್ಲಿ ಎರಡು ರೀತಿಯ ಲಿವರ್‌ಗಳು ಅಥವಾ ಬಟನ್‌ಗಳಿವೆ ಮತ್ತು ಎರಡೂ ಬಟನ್‌ಗಳು ನಿರ್ಗಮನ ಕವಾಟಕ್ಕೆ ಸಂಪರ್ಕ ಹೊಂದಿವೆ.
ಸಾಮಾನ್ಯವಾಗಿ ಟಾಯ್ಲೆಟ್ ಬಳಸುವ ಮುನ್ನ ಸಣ್ಣ ಬಟನ್ ಒತ್ತಿದರೆ ಸಾಕು. ಆದರೆ ಮಲ-ಮೂತ್ರ ವಿಸರ್ಜನೆಯ ನಂತರ ದೊಡ್ಡ ಬಟನ್ ಪ್ರೆಸ್ ಮಾಡಬೇಕು. ಇದರಿಂದ ಹೆಚ್ಚು ನೀರು ಬರುತ್ತದೆ ಮತ್ತು ಟಾಯ್ಲೆಟ್ ಬೇಗ ಸ್ವಚ್ಛವಾಗುತ್ತದೆ.
https://www.newsics.com/2025/04/17/do-you-know-what-the-girl-from-the-lifebuoy-ad-looks-like-now/