newsics.com
‘ಬಂಟಿ ನಿನ್ನ ಸಾಬೂನು ಸ್ಲೋ ನಾ’ ಈ ಡೈಲಾಗ್ ಬಹುತೇಕ ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಆಕೆ ಈಗ ಹೇಗಿದ್ದಾಳೆ ಗೊತ್ತಾ? ಏಳು ವರ್ಷದಲ್ಲಿ ಆ ಮುದ್ದು ಮುಖದ ಹುಡುಗಿ ಪೂರ್ಣ ಬದಲಾಗಿ ಹೋಗಿದ್ದಾಳೆ.
ಹಿಂದಿನ ಬಾಲ ಕಲಾವಿದರು ಈಗ ಚಲನಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಲೈಫ್ ಬಾಯ್ ಸಾಬೂನಿನ ಜಾಹೀರಾತಿನಲ್ಲಿ ನಟಿಸಿದ್ದ ಆ ಪುಟ್ಟ ಬಾಲಕಿಯ ಹೆಸರು ಅವನೀತ್ ಕೌರ್. ಆ ಜಾಹೀರಾತು ಚಿತ್ರೀಕರಣವಾಗಿದ್ದು 2013 ರಲ್ಲಿ. ಏಳು ವರ್ಷದಲ್ಲಿ ಅವನೀತ್ ಕೌರ್ ಪೂರ್ಣ ಬದಲಾಗಿ ಬಿಟ್ಟಿದ್ದಾಳೆ.
ಬಾಲ ಕಲಾವಿದೆಯಾಗಿ ವೃತ್ತಿಜೀವನ ಆರಂಭಿಸಿದ ಅವನೀತ್, ಮೊದಲು ಲೈಫ್‌ಬಾಯ್ ಜಾಹೀರಾತಿ ಮಾಡಿದ್ದರು. ಅದಾದ ನಂತರವೂ, ಅವರು 40 ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಒಳ್ಳೆಯ ಹೆಸರು ಗಳಿಸಿದರು. ಜಾಹೀರಾತುಗಳಲ್ಲಿ ಮಾತ್ರವಲ್ಲದೆ, ದೂರದರ್ಶನ ಧಾರಾವಾಹಿಗಳು ಮತ್ತು ನೃತ್ಯ ರಿಯಾಲಿಟಿ ಶೋಗಳಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಫೋಟೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿವೆ. ಅವರು ತಮ್ಮ ಗ್ಲಾಮರಸ್ ಲುಕ್ ನಿಂದ ಎಲ್ಲಾರ ಗಮನ ಸೆಳೆಯುತ್ತಿದ್ದಾರೆ.ಅವರು ಕಾಲಕಾಲಕ್ಕೆ ವೆಕೇಷನ್ಸ್ ಹೋಗಿ ಹಾಟ್ ಮತ್ತು ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಾರೆ
22 ವರ್ಷದ ಅವನೀತ್ ಕೌರ್ ಇನ್‌ಸ್ಟಾಗ್ರಾಂ ನಲ್ಲಿ ಸಖತ್ ಫೇಮಸ್ ಸೆಲೆಬ್ರಿಟಿ. ಇನ್‌ಸ್ಟಾಗ್ರಾಂ ನಲ್ಲಿ 1 ಕೋಟಿಗೂ ಹೆಚ್ಚು ಮಂದಿ ಫಾಲೋವರ್ಸ್ ಇದ್ದಾರೆ.
https://www.newsics.com/2025/04/17/donald-trump-gives-harvard-university-another-shock/