newsics.com
ಪುತ್ತೂರು: ದಕ್ಷಿಣ ಭಾರತದಲ್ಲೇ ನಾಗಾರಾಧನೆಗೆ ಪ್ರಸಿದ್ಧಿಯಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಆದಾಯ ಲೆಕ್ಕಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯೂ ಕುಕ್ಕೆ ದಾಖಲೆಯ ಆದಾಯ ಗಳಿಸುವುದರ ಜೊತೆಗೆ ಸತತ 14 ವರ್ಷದಿಂದ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಎಂಬ ಪ್ರಸಿದ್ಧಿ ಪಡೆದಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಶ್ರೀಮಂತ ದೇವಾಲಯದ ಪೈಕಿ ಕುಕ್ಕೆ ಸುಬ್ರಹ್ಮಣ್ಯ ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆಯಾಗಿದೆ. ಈ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಬಿರುದು ಪಡೆದಿದೆ. ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯೂ ಭಕ್ತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ 2011-12ರ ಆದಾಯ 56.24 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 72.73 ಕೋಟಿ, 2022-23ರಲ್ಲಿ 123 ಕೋಟಿ ಮತ್ತು 2023-24ರ ಆದಾಯ 146.01 ಕೋಟಿ. ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ದೇವಾಲಯದ ವಾರ್ಷಿಕ ಆದಾಯ ಹೆಚ್ಚಾಗುತ್ತಲೇ ಬಂದಿದೆ.
https://www.newsics.com/2025/04/17/why-are-there-two-flush-buttons-in-a-western-toilet/