newsics.com
ಯಾರ ಮನೇಲಿ ಜಿರಳೆ ಕಾಟ ಇಲ್ಲ ಹೇಳಿ. ಹಳ್ಳಿ ನಗರ ಎನ್ನದೆ ಎಲ್ಲರ ಮನೆಯಲ್ಲೂ ಜಿರಳೆ ಕಾಟ ಸಾಮಾನ್ಯವಾಗಿ ಬಿಟ್ಟಿದೆ. ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಮಗೆ ಒಂಥರಾ ಫೀಲ್ ಆಗುತ್ತೆ. ಅದರಲ್ಲೂ ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಜಿರಳೆಗಳು ನಮ್ಮ ಮನೆಯ ಅತಿಥಿಗಳಾಗಿ ಬಿಟ್ಟಿದ್ದಾರೆ. ಆದರೆ ಜೀವಂತವಾಗಿರಲಿ ಅಥವಾ ಸತ್ತಿರಲಿ ಜಿರಳೆಯನ್ನು ಕಾಲಿನಿಂದ ತುಳಿಯುವುದು ಅಪಾಯಕಾರಿ.
ಜಿರಳೆಗಳು ಮನೆಯಲ್ಲಿ ಎಲ್ಲೆಂದರಲ್ಲಿ ಇರಬಹುದು. ಅವು ಹೆಚ್ಚಾಗಿ ಹಳೆಯ ವಸ್ತುಗಳು ಮತ್ತು ಕೊಳಕು ಸ್ಥಳಗಳಲ್ಲಿ ಕಂಡುಬರುತ್ತವೆ. ಕೆಲವರಿಗೆ ಜಿರಳೆ ಕಂಡಾಕ್ಷಣ ತಮ್ಮ ಕಾಲುಗಳಿಂದ ತುಳಿದು ಸಾಯಿಸುವ ಅಭ್ಯಾಸ ಹೊಂದಿರುತ್ತಾರೆ. ಇದು ಅವರ ಕೆಟ್ಟ ಸ್ವಭಾವವು ಇರಬಹುದು. ಆದರೆ ಜಿರಳೆಗಳನ್ನು ಕಾಲಿನಿಂದ ತುಳಿಯುವುದು ನಮಗೆ ಅಪಾಯಕಾರಿ.
ಜಿರಳೆಗಳನ್ನು ಪಾದದಿಂದ ತುಳಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇವುಗಳಿಂದ ಹೊರಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮತ್ತು ಅವುಗಳನ್ನು ಉಸಿರಾಡುವುದರಿಂದ ಅಸ್ತಮಾ ಮತ್ತು ಅಲರ್ಜಿ ಸಮಸ್ಯೆಗಳು ಉಂಟಾಗುತ್ತದೆ. ಜಿರಳೆ ಸತ್ತಿರುವ ಜಾಗದಲ್ಲಿ ಉಸಿರಾಡುವಾಗ ಸುರಕ್ಷಿತವಾಗಿರುವುದು ಉತ್ತಮ.
ಸತ್ತ ಜಿರಳೆಯಿಂದ ಸಾಲ್ಮೊನೆಲ್ಲಾ, ಸ್ಟ್ರೆಪ್ಟೋಕೊಕಿ, ಸ್ಟ್ಯಾಫಿಲೋಕೊಕಿಯಂತಹ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತವೆ. ಇದು ಮಾನವ ದೇಹದಲ್ಲಿ ವಿಶೇಷವಾಗಿ ಕರುಳಿನಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಅತಿಸಾರ, ಕಾಲರಾ, ಟೈಫಾಯಿಡ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಜಿರಳೆಯನ್ನು ಕಾಲುಗಳಿಂದ ತುಳಿಯಬೇಡಿ. ಇದು ಖಂಡಿತ ಅಪಾಯ. ಜಿರಳೆ ಸಾಯಿಸಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಜಿರಳೆ ಸಮಸ್ಯೆಯಿದ್ದರೆ ಅದನ್ನು ಕೊಲ್ಲಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಔಷಧಗಳು ಲಭ್ಯವಿವೆ. ಅವುಗಳನ್ನು ಬಳಸಿ, ಸಾಯಿಸಿ. ಅದರ ಬದಲು ಕಾಲಿನಿಂದ ತುಳಿಯುವುದನ್ನು ತಪ್ಪಿಸಿ.