newsics.com
ಬಿಸಿಲ ಬೇಗೆ ಹೆಚ್ಚುತ್ತಿರುವ ಈ ಬೇಸಿಗೆಯು ಕೇವಲ ಮನುಷ್ಯರಿಗಷ್ಟೇ ಅಲ್ಲ, ಹುತ್ತದೊಳಗೆ, ಭೂಮಿಯೊಳಗೆ ಹೊಕ್ಕಿರುವ ಹಾವುಗಳಿಗೂ ಭೂತಾಪ ಜಿವಸಂಕಟ ಸೃಷ್ಟಿಸಿದೆ. ಇವುಗಳಿಗೆ ಭೂಮಿಯೊಳಗೆ ಇರಲಾಗದೇ ಈ ಸಮಯದಲ್ಲಿ ಹೊರಗೆ ಬರುವುದೇ ಹೆಚ್ಚು.
ಬೇಸಿಗೆ ಕಾಲ ಈ ಸಮಯದಲ್ಲಿ ಹಾವು ಕಚ್ಚುವುದಿಲ್ಲ. ಅದರ ಹಾವಳಿ ತುಂಬಾ ಕಡಿಮೆ ಎಂದರ್ಥವಲ್ಲ. ಬೇಸಿಗೆಯಲ್ಲೂ ಬಿಸಿಲಿನ ತಾಪಮಾನ ಸಹಿಸಲಾಗದೇ ಹಾವುಗಳು ಪೊದೆಗಳಿಂದ, ಹುತ್ತಗಳಿಂದ ಹೊರಗೆ ಬರುತ್ತವೆ. ಈ ಸೀಸನ್ನಲ್ಲಿಯೂ ಅವುಗಳ ಹಾವಳಿ ಹೆಚ್ಚಾಗಿಯೇ ಇರುತ್ತದೆ.
ಈ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳು ಹೊರಗೆ ಆಟವಾಡುವಾಗ ಅವರ ಬಗ್ಗೆ ಕಾಳಜಿವಹಿಸಬೇಕು. ಇಲ್ಲದಿದ್ದರೆ ಮಕ್ಕಳು ಹಾವಿನ ಕಡಿತಕ್ಕೆ ಒಳಗಾಗಬಹುದು. ಹೀಗೆ ಹಾವು ಕಚ್ಚಿದಾಗ ಎಷ್ಟೋ ಮಂದಿಗೆ ಈ ಸಮಯದಲ್ಲಿ ಏನು ಮಾಡಬೇಕೆಂದು ತಿಳಿದಿರುವುದಿಲ್ಲ.
ಹಾವು ಕಡಿತದ ಲಕ್ಷಣಗಳು ಯಾವುವು ಮತ್ತು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಎಂಬುವುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಅಲ್ಲದೇ ವೈದ್ಯರ ಬಳಿಗೆ ಕಡಿತಕ್ಕೊಳಗಾದವರನ್ನು ಕರೆದುಕೊಂಡು ಹೋಗುವುದಕ್ಕೂ ಮುನ್ನ ಅವರಿಗೆ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ತಿಳಿಯುವುದು ಸಹ ಅಗತ್ಯವಾಗಿದೆ.
ಹಾವು ಕಚ್ಚಿರುವುದು ಪತ್ತೆಯಾದ ತಕ್ಷಣವೇ ವ್ಯಕ್ತಿಯನ್ನು ಹಾವಿನಿಂದ ದೂರ ಕರೆದೊಯ್ದು ಆಂಬ್ಯುಲೆನ್ಸ್‌ಗೆ ಕರೆ ಮಾಡಿ. ಎದೆ ಭಾಗದಡಿ ಹಾವು ಕಚ್ಚಿದ್ದರೆ, ಆ ವ್ಯಕ್ತಿಯನ್ನು ಮಲಗಿಸಬೇಕು. ವಿಷ ಹರಡುವುದನ್ನು ತಡೆಯಲು ವ್ಯಕ್ತಿಯನ್ನು ಶಾಂತವಾಗಿರಿಸಬೇಕು.
ನಂತರ ಗಾಯವನ್ನು ಸ್ವಚ್ಛವಾದ ಬ್ಯಾಂಡೇಜ್‌ನಿಂದ ಮುಚ್ಚಿ ಮತ್ತು ದಾರದಿಂದ ಬಿಗಿಯಾಗಿ ಕಟ್ಟಿ. ಒಂದು ವೇಳೆ ಹಾವು ನಿಮ್ಮ ಕಾಲಿಗೆ ಕಚ್ಚಿದರೆ, ನೀವು ನಿಮ್ಮ ಬೂಟುಗಳನ್ನು ತೆಗೆದು ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ಹೋಗಬೇಕು.
ವೈದ್ಯರು ಔಷಧಿ ನೀಡಲು ಹೇಳುವವರೆಗೂ ಯಾವುದೇ ಔಷಧಿ ನೀಡಬೇಡಿ, ಹೃದಯದ ಮೇಲ್ಭಾಗದಲ್ಲಿರುವ ಗಾಯವನ್ನು ಕತ್ತರಿಸಲು ಪ್ರಯತ್ನಿಸಬೇಡಿ, ವಿಷವನ್ನು ಹೀರಲು ಪ್ರಯತ್ನಿಸಬೇಡಿ, ಗಾಯಕ್ಕೆ ಐಸ್ ಹಚ್ಚಬೇಡಿ, ಕೆಫೀನ್ ಅಥವಾ ಆಲ್ಕೋಹಾಲ್ ಇರುವ ಯಾವುದನ್ನೂ ನೀಡಬೇಡಿ.
https://www.newsics.com/2025/04/14/hombale-films-gives-a-hint-about-kgf-3/