newsics.com
ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಸರು ಕೇಳಿದ ತಕ್ಷಣ ಬಾಯಲ್ಲಿ ಎಂಥವರಿಗೂ ನೀರು ಬರುತ್ತದೆ. ಅವರಿಗಾಗಿಯೇ ಮಾವಿನ ಸುಗ್ಗಿ ಆರಂಭವಾಗಿದೆ.ಮಾವಿನ ಹಣ್ಣನ್ನು ತಿನ್ನಬೇಕು ಅಂದರೆ ಮಾರುಕಟ್ಟೆಗೆ ಹೋಗಿ ಖರೀದಿಸತ್ತೇವೆ. ಇನ್ನೂ ಕೆಲವರು ಆನ್ಲೈನ್ನಲ್ಲಿ ಆರ್ಡರ್ ಮಾಡಿ ಕೊಳ್ಳುತ್ತಾರೆ. ವಿವಿಧ ತಳಿಯ ಮಾವಿನ ಹಣ್ಣನ್ನು ಆನ್ಲೈನ್ನಲ್ಲಿ ಬುಕ್ ಮಾಡಿದರೆ ಇದೀಗ ಅಂಚೆ ಮೂಲಕ ಮಾವಿನ ಹಣ್ಣಿನ ಮನೆ ಬಾಗಿಲಿಗೆ ಬರಲಿದೆ. ಪ್ರತಿ ವರ್ಷದಂತೆಯೇ ಈ ಬಾರಿಯೂ ಅಂಚೆ ಇಲಾಖೆ ಮಾವಿನ ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ
ಏಪ್ರಿಲ್ 7ರಿಂದ ಬೆಂಗಳೂರಿನಲ್ಲಿ ಈ ಮನೆ ಮನೆಗೆ ಮಾವು ಡೆಲಿವರಿ ಕಾರ್ಯ ಆರಂಭವಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ರೈತರ ವೆಬ್ಸೈಟ್ನಲ್ಲಿ ಬುಕ್ ಮಾಡಿದ ಮಾವಿನ ಹಣ್ಣುಗಳನ್ನು ಭಾರತೀಯ ಅಂಚೆ ಇಲಾಖೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರು ಬುಕ್ ಮಾಡಲು ಮಾವು ಅಭಿವೃದ್ದಿ ನಿಮಗಮದ ವೆಬ್ಪೋರ್ಟಲ್ ಕರಿಸಿರಿ www.karsirimangoes.karnataka.gov.in ಭೇಟಿ ನೀಡಬೇಕು.
ವೆಬ್ಸೈಟ್ಗೆ ಭೇಟಿ ನೀಡಿದ ಬಳಿಕ ಲಾಗಿನ್ ಆಗಿ ಮಾವಿನ ಹಣ್ಣನ್ನು ಸೆಲೆಕ್ಟ್ ಮಾಡಬೇಕು. ಅದರ ದರ ಎಲ್ಲವನ್ನು ಪರಿಶೀಲಿಸಿ ಆನ್ಲೈನ್ನಲ್ಲಿಯೇ ಹಣ ಪಾವತಿ ಮಾಡಿದರೇ ಒಂದೇ ದಿನದಲ್ಲಿ ಮಾವಿನಹಣ್ಣು ನಿಮ್ಮ ಮನೆ ಬಾಗಿಲಿಗೆ ಅಂಚೆ ಇಲಾಖೆ ಸಿಬ್ಬಂದಿ ತಲುಪಿಸುತ್ತಾರೆ.
ನಂತರ ತಮಗೆ ಬೇಕಾಗುವ ತಳಿ ಹಣ್ಣನ್ನು ಆರ್ಡರ್ ಮಾಡಬಹುದು. ಹೀಗೆ ಬುಕ್ ಮಾಡಿದ ಹಣ್ಣು ನೇರವಾಗಿ ರೈತರಿಂದ ಗ್ರಾಹಕರ ಕೈಗೆ ಸೇರುತ್ತದೆ. ಒಂದು ಬಾಕ್ಸ್ನಲ್ಲಿ 3.5 ಕೆ.ಜಿ ಮಾವಿನ ಹಣ್ಣು ಇರಲಿದೆ. ಈ ಹಣ್ಣಿನ ಮೊತ್ತದ ಜೊತೆಗೆ ಪಾರ್ಸೆಲ್ ಚಾರ್ಜ್ ಸೇರಿ ಅಂಚೆ ಇಲಾಖೆ 82 ರೂಪಾಯಿ ತೆಗೆದುಕೊಳ್ಳಲಿದೆ. ಒಂದೊಂದು ಮಾವಿನ ತಳಿಯ ಹಣ್ಣಿಗೆ ಒಂದೊಂದು ಬೆಲೆ ಇದೆ.
https://www.newsics.com/2025/04/13/no-need-to-show-boarding-pass-anymore/