newsics.com
ಎಐ ನಮ್ಮ ಕೆಲಸವನ್ನು ಅತಿ ವೇಗವಾಗಿ, ಸುಲಭವಾಗಿ ಹಾಗೂ ಆರಾಮದಾಯಕವಾಗಿ ಮಾಡ್ತಿರುವ ಕಾರಣ, ವ್ಯಕ್ತಿಗಿಂತ ಎಐ ಮೇಲೆ ಭರವಸೆ ಹೆಚ್ಚಾಗ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮಹತ್ವದ ಬೆಳವಣಿಗೆ ಎಐನಿಂದ ಆಗಿದೆ. ಎಐ ಈಗ ಐವಿಎಫ್ ಕ್ಷೇತ್ರವನ್ನು ಪ್ರವೇಶಿಸಿದೆ.
ಎಐ ಸಹಾಯದಿಂದ IVF ವ್ಯವಸ್ಥೆ ಬಳಸಿಕೊಂಡು ಮಗುವೊಂದು ಜನಿಸಿದೆ. ಸಾಮಾನ್ಯವಾಗಿ ಐವಿಎಫ್ ನಲ್ಲಿ ಐಸಿಎಸ್ಐ ಎಂಬ ಸಾಂಪ್ರದಾಯಿಕ ಹಸ್ತಚಾಲಿತ ವಿಧಾನವನ್ನು ಬಳಕೆ ಮಾಡಲಾಗುತ್ತದೆ.
ಇದನ್ನು 1990 ರ ದಶಕದಿಂದಲೂ ಮಾಡಲಾಗುತ್ತಿದೆ. ಆದರೆ ಈ ಐವಿಎಫ್ ವಿಧಾನದಲ್ಲಿ ಎಐ ಬಳಕೆ ಮಾಡಿದಾಗ ಯಾವುದೇ ರೀತಿಯಲ್ಲಿಯೂ ಮಾನವ ಹಸ್ತಕ್ಷೇಪ ಮಾಡುವ ಅಗತ್ಯವಿರುವುದಿಲ್ಲ ಅಂದರೆ ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್ (ಐಸಿಎಸ್ಐ), ವೀರ್ಯ ಆಯ್ಕೆ, ನಿಶ್ಚಲತೆ ಸೇರಿದಂತೆ ಎಲ್ಲಾ 23 ಹಂತಗಳನ್ನು ಕೂಡ ರಿಮೋಟ್ ಡಿಜಿಟಲ್ ಕಂಟ್ರೋಲ್ ಮೂಲಕವೇ ಪೂರ್ಣಗೊಳಿಸಿದ್ದು, ಗ್ವಾಡಲಜಾರಾದ ಹೋಪ್ ಐವಿಎಫ್ ಮೆಕ್ಸಿಕೊದಲ್ಲಿಎಐ ಸಹಾಯದಿಂದ ಗಂಡು ಮಗು ಮಗು ಜನಿಸಿದೆ. 40 ವರ್ಷದ ತಾಯಿಗೆ ಐವಿಎಪ್ ನಲ್ಲಿ ಎಐ ಬಳಕೆ ಮಾಡಿ ವೈದ್ಯಕೀಯ ತಂಡ ಯಶಸ್ವಿಯಾಗಿದೆ.
.