newsics.com
ಕೌಲಾಲಂಪುರ: ಗ್ಯಾಸ್ ಪೈಪ್‌ಲೈನ್ ಸ್ಫೊಟಿಸಿ ಭೀಕರ ಅಗ್ನಿ ಅವಘಡ ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಬಳಿಯ ಪುತ್ರ ಹೈಟ್ಸ್‌ನಲ್ಲಿ ಮಂಗಳವಾರ ಸಂಭವಿಸಿದೆ.
ಬೆಳಿಗ್ಗೆ 8:10 ರ ಸುಮಾರಿಗೆ ಅಗ್ನಿ ಅವಘಡದ ಮಾಹಿತಿ ಬಂದಿದೆ. ಪೆಟ್ರೋನಾಸ್ ಅನಿಲ ಪೈಪ್‌ಲೈನ್ ಸೋರಿಕೆಯಾಗಿದ್ದು, ಪೈಪ್‌ಲೈನ್‌ನ 500 ಮೀಟರ್ ಬೆಂಕಿಗೆ ಆಹುತಿಯಾಗಿದೆ.
ಪುತ್ರ ಹೈಟ್ಸ್‌ನಲ್ಲಿರುವ ಗ್ಯಾಸ್ ಸ್ಟೇಷನ್ ಬಳಿ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿರುವ ಬೆಂಕಿಯ ಜ್ವಾಲೆ ಸುಮಾರು ಕಿಲೋಮೀಟರ್ ದೂರದವರೆಗೂ ಕಾಣಿಸುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 12 ಜನ ಗಾಯಗೊಂಡಿದ್ದಾರೆ ಮತ್ತು ಇತರ 82 ಜನರನ್ನು ಅವಘಡ ನಡೆದ ಸ್ಥಳದಿಂದ ರಕ್ಷಿಸಲಾಗಿದೆ.