newsics.com
Ugadi special ಯುಗಾದಿಯ ದಿನದಂದು ಮನೆಗೆ ಅದೃಷ್ಟ ತರುವ ವಸ್ತುಗಳನ್ನು ತಂದರೆ, ಸಕಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ ಎಂದು ಜ್ಯೋತಿಷ್ಯಜ್ಞರು ಹೇಳುತ್ತಾರೆ.
ಬೇವು- ಬೆಲ್ಲದಿಂದ ಹಿಡಿದು ನವಿಲು ಮೂರ್ತಿಯವರೆಗೆ, ಯಾವ ವಸ್ತು ತಂದರೆ ಏನು ಲಾಭ?
ಯುಗಾದಿ ಹಿಂದೂಗಳಿಗೆ ಮಾತ್ರವಲ್ಲ, ಹಿಂದೂಸ್ತಾನದ ಎಲ್ಲರಿಗೂ ಸಂಭ್ರಮದ ಹಬ್ಬ. ಅಂದು ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಲ್ಲದೆ ಈ ದಿನ ರಾಮನಿಗೆ ಪಟ್ಟಾಭಿಷೇಕ ಮಾಡಲಾಯಿತು ಎಂದೂ ಪುರಾಣಗಳು ಹೇಳುತ್ತವೆ. ಈ ಯುಗಾದಿ ಹಬ್ಬದಂದು ಮನೆಗೆ ಏನನ್ನು ತಂದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.
ಬೇವು- ಬೆಲ್ಲ
ಬೇವು ಹಾಗೂ ಬೆಲ್ಲವನ್ನು ತಂದು ನೀವೂ ತಿನ್ನುವುದಲ್ಲದೆ, ಇತರರಿಗೂ ಹಂಚಿ. ಬಾಳಿನಲ್ಲಿ ಸಿಹಿ ಕಹಿ ಸಮಾನವಾಗಿ ಸ್ವೀಕರಿಸಬೇಕು ಎಂಬ ಮನೋಭಾವ ನಿಮ್ಮದಾಗುತ್ತದೆ. ಬೇವಿನಲ್ಲಿರುವ ಕ್ರಿಮಿನಾಶಕ ಗುಣ ನಿಮ್ಮನ್ನು ಆರೋಗ್ಯವಾಗಿಡುತ್ತದೆ.
ತೆಂಗಿನಕಾಯಿ
ಯುಗಾದಿ ಹಬ್ಬದಂದು ಒಂದು ಸಣ್ಣ ತೆಂಗಿನಕಾಯಿಯನ್ನು ಮನೆಗೆ ತಂದು, ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ಎಚ್ಚರಿಕೆಯಿಂದ ಹಣ ಇಡುವ ಕಪಾಟಿನಲ್ಲಿ ಇಟ್ಟರೆ, ಅದು ಸಂಪತ್ತು, ಆರ್ಥಿಕ ಸಮೃದ್ಧಿ ಮತ್ತು ಮನೆಗೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಕೂರ್ಮ
ಲೋಹದ ಆಮೆಯನ್ನು ತಂದು ಮನೆಯಲ್ಲಿ ಇಡುವುದರಿಂದ ಅದೃಷ್ಟ ಹೆಚ್ಚಾಗಲಿದೆ. ವಿಶೇಷವಾಗಿ ಹಿತ್ತಾಳೆ ಆಮೆಯನ್ನು ತಂದರೆ ಮನೆಯಲ್ಲಿ ಎಲ್ಲಾ ಶುಭ ಕಾರ್ಯಗಳು ನಡೆಯುತ್ತವೆ. ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಹರಡುತ್ತದೆ ಎಂದು ಹೇಳಲಾಗುತ್ತದೆ.
ಲಾಫಿಂಗ್ ಬುದ್ಧ
ಯುಗಾದಿಯಂದು ಲಾಫಿಂಗ್ ಬುದ್ಧನ ವಿಗ್ರಹವನ್ನು ಮನೆಗೆ ತಂದು ಮನೆಯಲ್ಲಿಡುವುದು ಒಳ್ಳೆಯದು. ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಂದು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ಸ್ಥಳದಲ್ಲಿಡುವುದರಿಂದ ಸಾಕಷ್ಟು ಪ್ರಯೋಜನಗಳು ಆಗುತ್ತವೆ ಎಂದು ಹೇಳಲಾಗುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಮನೆಗೆ ತರುವುದರಿಂದ ಸಂತೋಷ ಹೆಚ್ಚಾಗುತ್ತದೆ. ಹಣದ ಕೊರತೆ ಉಂಟಾಗುವುದಿಲ್ಲ.
ತುಳಸಿ
ಯುಗಾದಿ ಹಬ್ಬದಂದು ತುಳಸಿ ಗಿಡವನ್ನು ತಂದು ಮನೆಯಲ್ಲಿ ಇಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಸಸ್ಯವೆಂದು ಪೂಜಿಸಲಾಗುತ್ತದೆ. ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ಲಕ್ಷ್ಮಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಅಂತಹ ತುಳಸಿ ಗಿಡವನ್ನು ಮನೆಯಲ್ಲಿಟ್ಟರೆ, ಮನೆಯಾದ್ಯಂತ ಸಕಾರಾತ್ಮಕ ಶಕ್ತಿ ಹರಡುತ್ತದೆ. ಮನೆಯಲ್ಲಿರುವ ಎಲ್ಲರೂ ಸಂತೋಷ ಮತ್ತು ಸಂತೃಪ್ತರಾಗುತ್ತಾರೆ ಎಂದು ಹೇಳಲಾಗುತ್ತದೆ.
ದಕ್ಷಿಣಮುಖಿ ಶಂಖ
ಯುಗಾದಿಯಂದು ಮನೆಗೆ ದಕ್ಷಿಣಮುಖಿ ಶಂಖವನ್ನು ತರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಹಣದ ಹರಿವು ಚೆನ್ನಾಗಿರಲು, ಶಂಖವನ್ನು ತಂದು ಪೂಜಿಸಿ, ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದು ಶ್ರೀಮಂತರನ್ನಾಗಿ ಮಾಡುತ್ತದೆ.
ನವಿಲು ಮೂರ್ತಿ
ಯುಗಾದಿಯ ದಿನದಂದು ನೀವು ಮೂರು ನವಿಲುಗಳ ವಿಗ್ರಹವನ್ನು ತಂದು ನಿಮ್ಮ ಮನೆಯಲ್ಲಿಟ್ಟರೆ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನಿಗೆ, ಲಕ್ಷ್ಮಿ ದೇವಿಗೆ ನವಿಲುಗಳು ತುಂಬಾ ಇಷ್ಟ, ಆದ್ದರಿಂದ ನವಿಲುಗಳನ್ನು ಸಾಕಿರುವ ಮನೆಯಲ್ಲಿ ಲಕ್ಷ್ಮಿದೇವಿಯು ವಾಸಿಸುತ್ತಾಳೆ. ಅಂದಮಾತ್ರಕ್ಕೆ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲನ್ನು ಸಾಕಲು ಮುಂದಾದರೆ ಸಂಕಷ್ಟಕ್ಕೊಳಗಾಗಬೇಕಾದೀತು. ಆದ್ದರಿಂದ ನವಿಲಿನ ವಿಗ್ರಹ ತಂದಿಡುವುದು ಉತ್ತಮ.
Ugadi festival ಯುಗಾದಿ ಹಬ್ಬಕ್ಕಾಗಿ ದಾವಣಗೆರೆ ಶಾವಿಗೆಗೆ ವಿದೇಶದಲ್ಲೂ ಫುಲ್ ಡಿಮ್ಯಾಂಡ್